Homeಕರ್ನಾಟಕನನ್ನ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ಸಂಬಂಧವೂ ಇಲ್ಲ, ನಮ್ಮವರಿಂದಲೇ ಅಪಪ್ರಚಾರ: ಬಿ ವೈ ವಿಜಯೇಂದ್ರ

ನನ್ನ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ಸಂಬಂಧವೂ ಇಲ್ಲ, ನಮ್ಮವರಿಂದಲೇ ಅಪಪ್ರಚಾರ: ಬಿ ವೈ ವಿಜಯೇಂದ್ರ

ನನ್ನ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆದಿದೆ. ಡಿ.ಕೆ.ಶಿವಕುಮಾರ್- ನನ್ನ ನಡುವಿನ ಆತ್ಮೀಯತೆ, ಎಲ್ಲೋ ಒಂದು ಕಡೆ ನಾನೇ ಅಡ್ಡ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂಬ ಆರೋಪಗಳೂ ಸಾಮಾಜಿಕ ಜಾಲತಾಣ, ಪತ್ರಿಕಾ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಗೆ ಕಾರಣವಾದುದು ನಮ್ಮವರೇ ಎಂಬ ಅರಿವು ನನಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಅವರು ಇಂದು ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು. ಇಬ್ಬರೂ ಜಯಶಾಲಿಯಾಗಿದ್ದಾರೆ. ಚುನಾವಣೆ ವೇಳೆ ಅಡ್ಡ ಮತದಾನ ನಡೆದಿದೆ. ಇದರಿಂದ ನಾನು ಸೇರಿದಂತೆ ಲಕ್ಷಾಂತರ ಕಾರ್ಯಕರ್ತರು ಬಹಳ ನೋವನ್ನು ಅನುಭವಿಸುವಂತಾಗಿದೆ. ಬಿಜೆಪಿ ಶಾಸಕರಿಂದ ಅಡ್ಡ ಮತದಾನವು ಬೇರೆ ಬೇರೆ ಚರ್ಚೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ಆಗಬೇಕೆಂದು ಹೇಳಿದ್ದು ನಿಜ ಎಂದ ಅವರು, ಪಕ್ಷದ ಹಿರಿಯ ನಾಯಕರ ಅಭಿಪ್ರಾಯ- ಕಿವಿಮಾತಿನನ್ವಯ ಅವರೆಲ್ಲರ ಮಾತಿಗೆ ಗೌರವ ಕೊಟ್ಟು ಕ್ಷೇತ್ರದ ಭಕ್ತನಾಗಿ ಪ್ರಾರ್ಥನೆ ಸಲ್ಲಿಸಲು ಬಂದಿರುವುದಾಗಿ ತಿಳಿಸಿದರು.

ನಮ್ಮ ಪ್ರಧಾನಿ ನರೇಂದ್ರ ಮೋದಿಜೀ, ಪಕ್ಷದ ಹಿಂದಿನ ಅಧ್ಯಕ್ಷ ಅಮಿತ್ ಶಾ ಜೀ ಮತ್ತು ಪಕ್ಷದ ಹಿರಿಯರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ರಾಜ್ಯಾಧ್ಯಕ್ಷನಾಗಿ ಇಂಥ ಕೀಳು ಮಟ್ಟದ ಕೆಲಸ ಮಾಡುವ ಪ್ರಶ್ನೆಯೇ ಉದ್ಭವವಾಗದು. ವಿಜಯೇಂದ್ರ- ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಯಾವುದೇ ಆತ್ಮೀಯತೆಯೂ ನಮ್ಮ ಮಧ್ಯೆ ಇಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷರಿಗೆ ಕೊಡಬೇಕಾದ ಗೌರವವನ್ನು ಕೊಟ್ಟಿದ್ದೇನೆ. ಒಬ್ಬ ಶಾಸಕನಾಗಿ ರಾಜ್ಯದ ಮುಖ್ಯಮಂತ್ರಿಗೆ ಕೊಡಬೇಕಾದ ಗೌರವವನ್ನು ಕೊಡಬೇಕಾಗುತ್ತದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಇದ್ದು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ ಕುರಿತು ಅವರು ವಿವರಿಸಿದರು. ನಮ್ಮೆಲ್ಲ ಶಾಸಕರು, ಸಂಸದರು, ಪಕ್ಷದ ಜಿಲ್ಲಾ ಅಧ್ಯಕ್ಷರ ಜೊತೆ ಶ್ರೀದೇವರ (ಶ್ರೀ ಮಂಜುನಾಥೇಶ್ವರ) ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು.
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಕಾಣುತ್ತಿದೆ. ಮಳೆ ಸರಿಯಾಗಿ ಬಿದ್ದು ನಾಡಿನ ರೈತನ ಬದುಕು ಹಸನಾಗಬೇಕು; ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಅವರಿಗೆ ಒಳಿತಾಗಲು ಪ್ರಾರ್ಥನೆ ಸಲ್ಲಿಸಿದ್ದಾಗಿ ವಿವರ ನೀಡಿದರು.

ಜೊತೆಗೆ ಮುಂದೆ ಮತ್ತೊಮ್ಮೆ ಯಾವಾಗ ವಿಧಾನಸಭಾ ಚುನಾವಣೆ ನಡೆದರೂ ಕರ್ನಾಟಕ ರಾಜ್ಯದಲ್ಲಿ ನಮ್ಮೆಲ್ಲರ ನೇತೃತ್ವದಲ್ಲಿ ಒಂದು ಜನಪರ ಸರಕಾರ ಅಧಿಕಾರಕ್ಕೆ ಬರಲಿ; ಹಿಂದುಗಳ ರಕ್ಷಣೆ ಮಾಡುವ, ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುವ ಒಳ್ಳೆಯ ಸರಕಾರ ಬರಲೆಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments