Homeಕರ್ನಾಟಕಸೋನಿಯಾ ಗಾಂಧಿ ಜೀವನ ಪಯಣ ಮಹಿಳೆಯರಿಗೆ ಸ್ಫೂರ್ತಿ: ಪ್ರಭಾ ಮಲ್ಲಿಕಾರ್ಜುನ್

ಸೋನಿಯಾ ಗಾಂಧಿ ಜೀವನ ಪಯಣ ಮಹಿಳೆಯರಿಗೆ ಸ್ಫೂರ್ತಿ: ಪ್ರಭಾ ಮಲ್ಲಿಕಾರ್ಜುನ್

ಭಾರತೀಯ ರಾಜಕೀಯದಲ್ಲಿ ತಮ್ಮದೇ ಆದ ವಿಶಿಷ್ಟ ನಾಯಕತ್ವದ ಛಾಪು ಮೂಡಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿಯವರ ಜೀವನ ಪಯಣವು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟಿದ್ದಾರೆ.

ಸೋನಿಯಾ ಗಾಂಧಿಯವರ ಜೀವನ ಪಯಣವನ್ನು ಅನಾವರಣಗೊಳಿಸುವ ‘ಬಿಲಾಂಗಿಂಗ್; ಎ ಜರ್ನಿ ಆಫ್‌ ಲವ್’ ಪುಸ್ತಕವನ್ನು ಸ್ವೀಕರಿಸಿ ಓದಿದ ನಂತರ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಸೋನಿಯಾ ಗಾಂಧಿಯವರ ಬದುಕು ಕೇವಲ ರಾಜಕೀಯ ನಾಯಕತ್ವದ ಕಥೆಯಲ್ಲ. ಅದು ಪ್ರೀತಿ, ತ್ಯಾಗ, ಸಹನೆ, ಧೈರ್ಯ ಹಾಗೂ ಜನಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುವ ಅಪೂರ್ವ ಜೀವನಗಾಥೆಯಾಗಿದೆ ಎಂದು ತಿಳಿಸಿದ್ದಾರೆ.

ರಾಜಕೀಯ ಹಾಗೂ ವೈಯಕ್ತಿಕ ಬದುಕಿನಲ್ಲಿ ಎದುರಾದ ಅನೇಕ ಸವಾಲುಗಳ ನಡುವೆಯೂ ಸೋನಿಯಾ ಗಾಂಧಿಯವರು ಪ್ರದರ್ಶಿಸಿದ ದೃಢನಿಶ್ಚಯ, ದೂರದೃಷ್ಟಿ ಮತ್ತು ಜನಪರ ಕಾಳಜಿ ಅನುಕರಣೀಯವಾಗಿದೆ. ಕಠಿಣ ಸಂದರ್ಭಗಳಲ್ಲಿಯೂ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿ, ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ವಿಶೇಷವಾಗಿ ಮಹಿಳೆಯಾಗಿ ಹಲವು ಸವಾಲುಗಳನ್ನು ಎದುರಿಸಿ, ದೇಶದ ರಾಜಕೀಯದಲ್ಲಿ ಪ್ರಭಾವಶಾಲಿ ನಾಯಕತ್ವ ನೀಡಿರುವ ಸೋನಿಯಾ ಗಾಂಧಿಯವರ ಜೀವನ ಪಯಣವು ನನ್ನಂತಹ ಮಹಿಳಾ ಜನಪ್ರತಿನಿಧಿಗಳಿಗೆ ಸದಾ ಸ್ಫೂರ್ತಿಯ ಮೂಲವಾಗಿದೆ. ಅವರ ಧೈರ್ಯ, ತಾಳ್ಮೆ ಹಾಗೂ ಜನಸೇವೆಯ ಬದ್ಧತೆ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಪ್ರೀತಿ, ಅಗಲಿಕೆ, ಬದುಕಿನ ಏಳುಬೀಳುಗಳು ಹಾಗೂ ತನ್ನತನದ ಹುಡುಕಾಟವನ್ನು ಒಳಗೊಂಡಿರುವ ಈ ಕೃತಿ ಜೀವನದ ಹಲವು ಆಯಾಮಗಳನ್ನು ಪರಿಚಯಿಸಲಿದೆ. ಸೋನಿಯಾ ಗಾಂಧಿಯವರ ವೈಯಕ್ತಿಕ ಅನುಭವಗಳು ಮತ್ತು ರಾಜಕೀಯ ಪಯಣವನ್ನು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಬೇಕು. ನಾನು ಕೂಡ ಪುಸ್ತಕ ಓದಿದ್ದೇನೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments