ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2024ನೇ ವರ್ಷದ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳು ಕ್ಯಾಲೇಂಡರ್ ಬಿಡುಗಡೆ ಮಾಡಿ ಸಂಘದ ಮನವಿ ಸ್ವೀಕರಿಸಿ, ಸಂಘ ಮುಂದಿಟ್ಟಿರುವ ಬೇಡಿಕೆಗಳನ್ನು ಪರಿಶೀಲಿಸಿ, ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಎಂ. ಪಾಳ್ಯ, ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್ ಬಿ.ಎನ್., ನಿರ್ದೇಶಕರಾದ ವಿನೋದ್ ಕುಮಾರ್ ಬಿ. ನಾಯ್ಕ, ರಮೇಶ್ ಹಿರೇಜಂಬೂರು, ಸೋಮಣ್ಣ ಕೆ.ಎಸ್., ಧ್ಯಾನ್ ಪೂಣಚ್ಚ, ಆನಂದ ಪಿ. ಬೈದನಮನೆ, ಪರಮೇಶ್ವರ್ ಕೆ.ವಿ., ವನಿತಾ ಎನ್., ನಯನಾ ಎಸ್., ಕಾರ್ಯದರ್ಶಿ ಕೆಂಪಣ್ಣ, ಸಿಬ್ಬಂದಿಗಳಾದ ವಿನುತಾ, ಹೇಮಂತ್, ಆನಂದ್ ಉಪಸ್ಥಿತರಿದ್ದರು.