Homeಕರ್ನಾಟಕಬ್ರ್ಯಾಂಡ್ ಬೆಂಗಳೂರು ಜನರ ಪಾಲಿಗೆ ಬ್ಯಾಡ್ ಬೆಂಗಳೂರು: ಜೆಡಿಎಸ್ ಲೇವಡಿ

ಬ್ರ್ಯಾಂಡ್ ಬೆಂಗಳೂರು ಜನರ ಪಾಲಿಗೆ ಬ್ಯಾಡ್ ಬೆಂಗಳೂರು: ಜೆಡಿಎಸ್ ಲೇವಡಿ

ಡಿಸಿಎಂ ಡಿಕೆಶಿಯವರ ‘​ಬ್ರ್ಯಾಂಡ್ ಬೆಂಗಳೂರು’ ಎಂಬುದು ಬರಿ ಬಣ್ಣದ ಮಾತಾಯ್ತು, ಜನರ ಪಾಲಿಗೆ ‘ಬ್ಯಾಡ್ ಬೆಂಗಳೂರು’ ಬೆನ್ನೆತ್ತಿದೆ! ಇಂದು ಜೆಡಿಎಸ್ ಲೇವಡಿ ಮಾಡಿದೆ.

ಈ ಕುರಿತು ಎಕ್ಸ್ ತಾಣದಲ್ಲಿ ಬರೆದುಕೊಂಡಿರುವ ಪಕ್ಷ, “ಮಳೆ ಬಂದರೆ ಸಾಕು ಬೆಂಗಳೂರಿನ ನಾಗರಿಕರಿಗೆ ನರಕ ಸದೃಶ. ಬಿಬಿಎಂಪಿಯನ್ನು GBA ಹೆಸರಲ್ಲಿ ಐದು ಪಾಲಿಕೆಗಳಾಗಿ ವಿಭಾಗಿಸಿ ಏನು ಪ್ರಯೋಜನಾ ? ಬೆಂಗಳೂರು ನಗರದಾದ್ಯಂತ ಇಂದು ಮಳೆ ಅನಾಹುತದಿಂದ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ನೀರು ನಿಂತು ಕರೆಯಂತಾಗಿರುವ ಟ್ರಾಫಿಕ್ ಜಾಮ್’ನಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ” ಎಂದು ಕುಟುಕಿದೆ.

“ಮಳೆಹಾನಿ ಸಮಸ್ಯೆಗಳ ಪರಿಹಾರಕ್ಕೆ ಕರೆ ಮಾಡಿದರೆ ತುರ್ತು ಕರೆಗಳನ್ನು ಸ್ವೀಕರಿಸುವವರೇ ಇಲ್ಲ. ಸಹಾಯವಾಣಿಯು ಕೆಲಸಕ್ಕೆ ಬರುತ್ತಿಲ್ಲ, ಕಾಲ್ ಕೂಡ ಕನೆಕ್ಟ್ ಆಗುತ್ತಿಲ್ಲ. ತೆರಿಗೆ ಮೇಲೆ ತೆರಿಗೆ ಹಾಕಿ, ದರ ಏರಿಕೆ ಮಾಡಿ ವಸೂಲಿ‌ ಮಾಡುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬೆಂಗಳೂರಿಗರ ಸಂಕಷ್ಟಗಳಿಗೆ ಸ್ಪಂದಿಸದ ಉಸ್ತವಾರಿ ಸಚಿವ ಡಿ ಕೆ ಶಿವಕುಮಾರ್ ಅವರೇ, ಯಾವ ಪುರುಷಾರ್ಥಕ್ಕೆ ಜಿಬಿಎ ಮಾಡಿದ್ದು ? ‘ಯೋಜನೆಗಳು’ ಕೇವಲ ಕಾಗದದ ಮೇಲಿದೆಯೇ? ಇದುವೇನಾ ನಿಮ್ಮ ಬ್ರಾಂಡ್ ಬೆಂಗಳೂರು” ಎಂದು ಪ್ರಶ್ನೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments