Homeಕರ್ನಾಟಕಚಳಿಗಾಲ ಅಧಿವೇಶನ | ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, 3.30ಕ್ಕೆ ಮತ್ತೆ ಕಲಾಪ ಆರಂಭ

ಚಳಿಗಾಲ ಅಧಿವೇಶನ | ಅಗಲಿದ ಗಣ್ಯರಿಗೆ ಸಂತಾಪ ಸೂಚನೆ, 3.30ಕ್ಕೆ ಮತ್ತೆ ಕಲಾಪ ಆರಂಭ

ಬೆಳಗಾವಿ: 16ನೇ ವಿಧಾನಸಭೆಯ ಎರಡನೆಯ ಅಧಿವೇಶನ (ಚಳಿಗಾಲ ಅಧಿವೇಶನ) ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಆರಂಭವಾಗಿದೆ.

ಡಿ.4ರಿಂದ ಡಿ.15ರವರೆಗೆ ಹತ್ತುದಿನಗಳ ಕಾಲ ಅಧಿವೇಶನ ನಡೆಯಲಿದೆ. ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಸಚಿವರು ಹಾಗೂ ಶಾಸಕರಿಗೆ ಸಂವಿಧಾನ ಪೀಠಿಕೆ ಬೋಧಿಸುವುದರೊಂದಿಗೆ ಅಧಿವೇಶನ ಆರಂಭಿಸಿದರು.

ಸಂತಾಪ ಸೂಚಕ ನಿರ್ಣಯ

16ನೇ ವಿಧಾನಸಭೆಯ ಮೊದಲ ಅಧಿವೇಶನದಿಂದ ಈವರೆಗೂ ಅಗಲಿದ ಗಣ್ಯರಾದ
ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಡಿ ಬಿ ಚಂದ್ರೇಗೌಡ, ಮಾಜಿ ಸಚಿವ ರಂಗದೇವರಾಯಲು, ಮಾಜಿ ಶಾಸಕ ವೆಂಕಟೇಶಪ್ಪ, ಶ್ರೀಕಾಂತ ಶೆಟ್ಟಪ್ಪ ಭೀಮಣ್ಣವರ್‌, ವಿಲಾಸಬಾಬು ಅಲಮಮೇಕರ್‌ ಹಾಗೂ ಈಶಾನ್ಯ ರಾಜ್ಯಗಳ ಮಾಜಿ ರಾಜ್ಯಪಲರಾಗಿದ್ದ ಪಿ ಬಿ ಆಚಾರ್ಯ ಸೇರಿದಂತೆ ದಾಳಿಯಲ್ಲಿ ನಿಧನ ಹೊಂದಿದ ಸೈನಕರಿಗೆ ಸಂತಾಪ ಸೂಚಕ ನಿರ್ಣಯವನ್ನು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಮಂಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್‌ ಅಶೋಕ, ಸಚಿವರಾದ ಡಾ. ಜಿ. ಪರಮೇಶ್ವರ್‌, ಎಚ್‌ ಕೆ ಪಾಟೀಲ, ಶಿವರಾಜ ತಂಗಡಗಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ, ಶಾಸಕರಾದ ಬಸವರಾಜ ರಾಯರೆಡ್ಡಿ ಸೇರಿದಂತೆ ಸಭಾಧ್ಯಕ್ಷರು ಸೂಚಿಸಿದ ಸದಸ್ಯರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರಾರಂಭವಾದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಸಭಾ ಕಲಾಪದಲ್ಲಿ ಪಾಲ್ಗೊಂಡು, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments