ಬಿ ವೈ ವಿಜಯೇಂದ್ರ ಕುರಿತು ಸಿ ಟಿ ರವಿಯ ಬಾಯಲ್ಲಿ ಬಂದಿದ್ದು ಕೇವಲ ಅವರೊಬ್ಬರ ಮಾತಲ್ಲ, ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು ಎಂದು ಕಾಂಗ್ರೆಸ್ ಕುಟುಕಿದೆ.
ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಯಡಿಯೂರಪ್ಪನವರ ಪುತ್ರನ ಅಧ್ಯಕ್ಷ ಗಾದಿಯ ಪದಗ್ರಹಣ ಕಾರ್ಯಕ್ರಮಕ್ಕೆ ಹಾಜರಿರುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಸಿ ಟಿ ರವಿ ಹೇಳಿದ್ದಾರೆ. ಇದೆಲ್ಲ ಇಡೀ ಸಂತೋಷ ಕೂಟದ ಅಸಹನೆಯ ಮಾತುಗಳು” ಎಂದು ಛೇಡಿಸಿದೆ.
“ನಾನು ಹಿಂದೂ ಹುಲಿ ಎನ್ನುತ್ತಿದ್ದ ಬಚ್ಚಲು ಬಾಯಿಯ ಬಸನಗೌಡ ಪಾಟೀಲ್ ಯತ್ನಾಳ್
ಇಲಿಯಾಗಿ ಬಿಲ ಸೇರಿದ್ದಾರೆ. ಇತ್ತ ಸಿ ಟಿ ರವಿ ಕುದಿಯುತ್ತಿರುವ ತಾಪ 100 ಡಿಗ್ರಿ ದಾಟಿದೆ! ಅಶ್ವತ್ಥ ನಾರಾಯಣ ಹತಾಶೆ ಮುಗಿಲು ಮುಟ್ಟಿದೆ. ಹೊಸ ಅಧ್ಯಕ್ಷರ ಪದಗ್ರಹಣವು ಬಿಜೆಪಿಗೆ “ಕೇತು ಗ್ರಹಣ”ವಾಗಿ ಪರಿಣಮಿಸುವುದು ನಿಶ್ಚಿತ!” ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
‘ವಿಜಯೇಂದ್ರ ಒಬ್ಬನೇ ಎಲ್ಲವೂ ಅಲ್ಲ’ ಎಂದು ಈಶ್ವರಪ್ಪ ಹೇಳಿದ್ದಾರೆ. ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ – ಪೇಶ್ವೆ ಜೋಷಿಗಳು (ಕುಮಾರಸ್ವಾಮಿಯವರು ಕೊಟ್ಟ ಹೆಸರು!). ವಿಜಯೇಂದ್ರರ ಪದಗ್ರಹಣಕ್ಕೆ ನಾನು ಹೋಗುವುದಿಲ್ಲ- ಸಿ ಟಿ ರವಿ. ಸೈಲೆಂಟ್ ಸೋಮಣ್ಣ , ವಿಜಯೇಂದ್ರ ಬಗ್ಗೆ ನೋ ಕಾಮೆಂಟ್ಸ್ – ಬೆಲ್ಲದ್. ಬಿ ಎಲ್ ಸಂತೋಷ್ ಗಾಢ ಮೌನ. ಇಷ್ಟು ದಿನ ಒಡೆದ ಮನೆಯಾಗಿತ್ತು, ಇನ್ಮುಂದೆ ಯುದ್ಧಕಣವಾಗುವುದು ನಿಶ್ಚಿತ, ಸಂತೋಷ ಕೂಟ ರಣವಿಳ್ಯ ನೀಡಲು ತಾಯರಾಗುತ್ತಿದೆ!” ಎಂದು ಲೇವಡಿ ಮಾಡಿದೆ.