Homeಕರ್ನಾಟಕಕುಸಿದು ಬಿದ್ದ ಆರ್ಥಿಕತೆ, ನಿರುದ್ಯೋಗ ಪ್ರಮಾಣ ವೃದ್ಧಿ, ಇದೇ ಮೋದಿ ಭಾರತ: ಪ್ರಿಯಾಂಕ್ ಖರ್ಗೆ...

ಕುಸಿದು ಬಿದ್ದ ಆರ್ಥಿಕತೆ, ನಿರುದ್ಯೋಗ ಪ್ರಮಾಣ ವೃದ್ಧಿ, ಇದೇ ಮೋದಿ ಭಾರತ: ಪ್ರಿಯಾಂಕ್ ಖರ್ಗೆ ಟೀಕೆ

ಭಾರತವನ್ನು ಜಗತ್ತು ಗುರುತಿಸುವುದು ಗಾಂಧಿ, ಬುದ್ಧ, ಅಂಬೇಡ್ಕರ್, ನೆಹರುರವರಿಂದಲೇ ಹೊರತು ಸಾವರ್ಕರ್, ಗೋಡ್ಸೆಯಿಂದಲ್ಲ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಗರನ್ನು ಕುಟುಕಿದ್ದಾರೆ.

ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, “ಈ ದೇಶ ಭವ್ಯ ಭಾರತವಾಗಿ ಗುರುತಿಸಿಕೊಂಡು ದಶಕಗಳು ಕಳೆದಿವೆ. ಬಹುಶಃ ಬಿಜೆಪಿಗರು ಈಗ ಹುಟ್ಟಿ, ಈಗ ಕಣ್ಣು ಬಿಟ್ಟಿರಬಹುದು. ಮೋದಿಯಿಂದ ಭಾರತವನ್ನು ಗುರುತಿಸುವ ವಿಷಯಗಳು ಬೇರೆಯೇ ಇವೆ” ಎಂದಿದ್ದಾರೆ.

◆ ಕುಸಿದು ಬಿದ್ದ ಆರ್ಥಿಕತೆಗೆ

◆ ನಿರುದ್ಯೋಗ ಪ್ರಮಾಣ ವೃದ್ಧಿಗೆ

◆ ಕೋಮು ಸಂಘರ್ಷಕ್ಕೆ

◆ ಟೆಲಿಫ್ರಾಂಪ್ಟರ್‌ಗೆ

◆ ಮಣಿಪುರದ ಗಲಭೆಗೆ

◆ ಸರ್ವಾಧಿಕಾರಕ್ಕೆ

◆ ಮತಗಳ್ಳತನಕ್ಕೆ

◆ ಪ್ರಜಾಪ್ರಭುತ್ವ ವ್ಯವಸ್ಥೆಯ ಕುಸಿತಕ್ಕೆ

ಈ ಎಲ್ಲ ನಕಾರಾತ್ಮಕ ವಿಷಯಗಳಿಂದ ಭಾರತವನ್ನು ಗುರುತಿಸುವಂತಾಗಿರುವುದು ಮೋದಿಯವರ ಹೆಗ್ಗಳಿಕೆ.
ಇಂತಹ ಗುರುತಿಸುವಿಕೆ ದೇಶಕ್ಕೆ ಕೆಟ್ಟ ಹೆಸರೇ ಹೊರತು ಬೆನ್ನು ತಟ್ಟಿಕೊಳ್ಳುವ ಸಂಗತಿಯಲ್ಲ ಎಂದು ಟೀಕಿಸಿದ್ದಾರೆ.

ಗಾಂಧಿಯನ್ನು ಅಪ್ರಸ್ತುತಗೊಳಿಸುವ ಬಿಜೆಪಿಗರ ಪ್ರಯತ್ನಕ್ಕೆ ಸಾವಿರ ವರ್ಷಗಳಾದರೂ ಯಶಸ್ಸು ಸಿಗುವುದಿಲ್ಲ.
ಬುದ್ಧ, ಗಾಂಧಿ, ಅಂಬೇಡ್ಕರ್, ನೆಹರು. ಇವರೆಲ್ಲರೂ ಈ ದೇಶದ ಆತ್ಮಶಕ್ತಿ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments