Homeಕರ್ನಾಟಕವಿಶೇಷ ಚೇತನ ಕ್ರೀಡಾಪಟುವಿನ ಕನಸು ನನಸು ಮಾಡಿದ ಸಚಿವ ಜಮೀರ್ ಅಹಮದ್ ಖಾನ್

ವಿಶೇಷ ಚೇತನ ಕ್ರೀಡಾಪಟುವಿನ ಕನಸು ನನಸು ಮಾಡಿದ ಸಚಿವ ಜಮೀರ್ ಅಹಮದ್ ಖಾನ್

ಬೆಳಗಾವಿ: ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಕಳುಹಿಸಬೇಕು ಎಂಬ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಬಹಳ ವರ್ಷಗಳ ಕನಸನ್ನು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ನನಸು ಮಾಡಿದ್ದಾರೆ.

ಬೆಳಗಾವಿಯ ವೀರಭದ್ರ ನಗರ ನಿವಾಸಿ ವಿಶೇಷ ಚೇತನ ಕ್ರೀಡಾಪಟು ರಿಜ್ವಾನಾ ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಗೆ ಕಳುಹಿಸಲು ತನಗೆ ಬಂದಿದ್ದ ಪ್ರಶಸ್ತಿ ಮೊತ್ತ 25 ಸಾವಿರ ರೂ. ಜಮೆ ಮಾಡಿ ಉಳಿದ 75 ಸಾವಿರ ಮೊತ್ತ ಕೂಡಿಸಲು ಸಂಕಷ್ಟ ಪಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಚಿವರು, ಗುರುವಾರ ರಿಜ್ವಾನಾ ಹಾಗೂ ತಾಯಿ ದಿಲ್ ಶಾದ್ ಅವರನ್ನು ಕರೆದು ಒಂದು ಲಕ್ಷ ರೂ. ಚೆಕ್ ನೀಡಿದರು.

ಉಮ್ರಾ ಯಾತ್ರೆಯ ಸಂಪೂರ್ಣ ಮೊತ್ತ ಸಚಿವರೇ ಭರಿಸಿದ್ದಕ್ಕೆ ರಿಜ್ವಾ ನಾ ಹಾಗೂ ದಿಲ್ ಶಾದ್ ಅವರು ಸಂತಸ ವ್ಯಕ್ತ ಪಡಿಸಿ ಕೃತಜ್ಞತೆ ಸಲ್ಲಿಸಿದರು.
ರಿಜ್ವಾ ನಾ ಅವರ ತಂದೆ ಕಾಲ ವಾಗಿದ್ದು ತಾಯಿ ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments