Homeಕರ್ನಾಟಕಬೆತ್ತಲೆ ಫೋಟೋ ಸೋರಿಕೆ ಮಾಡುವುದಾಗಿ ಬೆದರಿಸಿ ಸ್ನೇಹಿತನಿಂದಲೇ 65 ಲಕ್ಷ ಸುಲಿಗೆ ಮಾಡಿದ ವಂಚಕ

ಬೆತ್ತಲೆ ಫೋಟೋ ಸೋರಿಕೆ ಮಾಡುವುದಾಗಿ ಬೆದರಿಸಿ ಸ್ನೇಹಿತನಿಂದಲೇ 65 ಲಕ್ಷ ಸುಲಿಗೆ ಮಾಡಿದ ವಂಚಕ

ಸ್ನೇಹದ ಹೆಸರಿನಲ್ಲಿ ಮೋಸ ಹೋದ ಘಟನೆಯೊಂದು ನಗರದಲ್ಲಿ ನಡೆದಿದ್ದು, ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ ಬೆತ್ತಲೆ ಫೋಟೋ ಸೋರಿಕೆ ಮಾಡುವುದಾಗಿ ಬೆದರಿಸಿ ಸ್ನೇಹಿತನಿಂದಲೇ ಬರೋಬ್ಬರಿ 65 ಲಕ್ಷ ರೂ ಸುಲಿಗೆ ಮಾಡಿದ್ದಾನೆ.

ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ನೇಹಿತನ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಅಣ್ಣ-ತಮ್ಮ ಸುಳ್ಳಿನ ಜಾಲ ಬೀಸಿ ವಿಶ್ವಾಸ ದ್ರೋಹ ಬಗೆದು ನಿನ್ನ ಖಾಸಗಿ ಪೋಟೋಗಳು ನನ್ನ ಬಳಿಯಿದ್ದು ಅವುಗಳನ್ನು ಸೋರಿಕೆ ಮಾಡಿ ಮಾನ ತೆಗೆಯುವುದಾಗಿ ಬೆದರಿಸಿ 65 ಲಕ್ಷ ಹಣ ದೋಚಿದ್ದಾರೆ.

ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ 18 ವರ್ಷಗಳ ಸ್ನೇಹ ಹೊಂದಿದ್ದ ಬಿಟಿಎಂ ಲೇಔಟ್ ನ‌‌ ಸಹೋದರರಾದ ಅಕ್ಷಯ್ ಕುಮಾರ್ ಹಾಗೂ ಭರತ್ ಸ್ನೇಹವನ್ನೇ ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ್ದಾರೆ.

ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಅವನಿಗೆ ಅರ್ಜೆಂಟಾಗಿ 12 ಲಕ್ಷ ಕೊಡಬೇಕು ಎಂದು‌ ನಂಬಿಸಿದ್ದಾರೆ. ಸ್ನೇಹಿತ ನನ್ನ ಒಳ್ಳೆಯದಕ್ಕಾಗಿ ಹೇಳುತ್ತಿದ್ದಾನೆ ಎಂದು ನಂಬಿದ ಟೆಕ್ಕಿ ಹಣ ಕೊಟ್ಟಿದ್ದಾನೆ. ಹೀಗೆ ಪದೇ ಪದೇ ಹಣ ಪಡೆದು ದೋಖಾ ಮಾಡಿದ್ದಾರೆ.

ಸ್ನೇಹಿತರು ಹೇಳುತ್ತಿರುವುದು ನಿಜ ಎಂದು ನಂಬಿ ಮೋಸ ಹೋದ ಟೆಕ್ಕಿ, ಮನೆಯವರು, ಬ್ಯಾಂಕ್ ಲೋನ್ ಮಾಡಿ ಹಣ ಕೊಟ್ಟಿದ್ದ. ಆದರೆ ಕೊನೆಗೆ ಸ್ನೇಹಿತರಿಬ್ಬರ ಕಳ್ಳಾಟ ಬಯಲಾಗಿದೆ. ಸ್ನೇಹಿತರ ಮಕ್ಮಲ್ ಟೋಪಿ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಣ್ಣ ತಮ್ಮನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments