Homeದೇಶಬದುಕಿಗೆ ವಿದಾಯ ಹೇಳಿದ ದೇಶದ ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್

ಬದುಕಿಗೆ ವಿದಾಯ ಹೇಳಿದ ದೇಶದ ಖ್ಯಾತ ಗಝಲ್ ಗಾಯಕ ಪಂಕಜ್ ಉಧಾಸ್

ದೇಶದ ಖ್ಯಾತ ಗಝಲ್ ಗಾಯಕ, ಪದ್ಮಶ್ರೀ ಪ್ರಶಸ್ತಿ ವಿಜೇತ ಪಂಕಜ್ ಉಧಾಸ್ ಸೋಮವಾರ ಬದುಕಿನ ಹಾಡು ಮುಗಿಸಿ ಕೊನೆಯುಸಿರೆಳೆದಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪಂಕಜ್‌ ಉಧಾಸ್‌ ಅವರಿಗೆ 72 ವರ್ಷವಾಗಿತ್ತು. ‘ಚಿಟ್ಟಿ ಆಯಿ ಹೈ’ ‘ಚಾಂದ್ ಜೈಸ ರಂಗ್‌’ನಂತಹ ಗಝಲ್‌ಗಳನ್ನು ಹಾಡಿ ಖ್ಯಾತಿ ಪಡೆದಿದ್ದ ಪಂಕಜ್ ಉಧಾಸ್ ದೀರ್ಘ ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದರು.

ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ನಯಾಬ್ ಉಧಾಸ್ ಅವರು ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ಹಿಂದಿ ಸಿನಿಮಾ ಹಾಗೂ ಭಾರತೀಯ ಪಾಪ್ ಸಂಗೀತಕ್ಕೆ ಗಣನೀಯ ಕೊಡುಗೆ ನೀಡಿದ್ದ ಪಂಕಜ್ ಉಧಾಸ್ ಅವರು 1980 ರಲ್ಲಿ ತಮ್ಮ ಗಝಲ್ ಆಲ್ಬಂ “ಆಹತ್” ನಿಂದ ಖ್ಯಾತಿಯ ಶಿಖರವೇರಿದ್ದರು. ನಂತರ “ಮುಕರರ್, “ತರನಂ,” “ಮೆಕ್ಸಿಲ್” ಹೀಗೆ ಒಂದಾದ ಒಂದರಂತೆ ಹಿಟ್ ಆಲ್ಬಂಗಳನ್ನು ನೀಡಿದ್ದರು.

“ನಾಮ್” ಸಿನಿಮಾದ “ಚಿಟ್ಟಿ ಆಯೀ ಹೈ” ಅವರಿಗೆ ಬಹಳಷ್ಟು ಜನಪ್ರಿಯತೆ ನೀಡಿದ್ದವು. ಭಾರತ ಸರ್ಕಾರ ಅವರಿಗೆ 2006ರಲ್ಲಿ ಪದ್ಮ ಶ್ರೀ ನೀಡಿ ಗೌರವಿಸಿದೆ.

ಕಿಚ್ಚ ಸುದೀಪ್‌ ಅಭಿನಯದ ಸ್ಪರ್ಶ ಸಿನಿಮಾದ ಎರಡು ಹಾಡುಗಳಿಗೆ ಪಂಕಜ್‌ ಉಧಾಸ್‌ ಧ್ವನಿಯಾಗಿದ್ದರು. ಚಂದಕ್ಕಿಂತ ಚಂದ ನೀನೇ ಸುಂದರ ಮತ್ತು ಬರೆಯದ ಮೌನದ ಕವಿತೆ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ.

1990ರಲ್ಲಿ ಘಾಯಲ್ ಚಿತ್ರಕ್ಕಾಗಿ ಲತಾ ಮಂಗೇಶ್ವರ್ ಜೊತೆಗಿನ ಅವರ ಯುಗಳ ಗೀತೆ “ಮಹಿಯಾ ತೇರಿ ಕಸಂ,” 1994ರಲ್ಲಿ ಮೊಹ್ರಾ ಸಿನಿಮಾಕ್ಕಾಗಿ ಸಾಧನಾ ಸರ್ಗಂ ಜೊತೆಗೆ ಅವರು ಹಾಡಿದ “ನ ಕಜೈ ಕಿ ಧರ್” ಜನಪ್ರಿಯವಾಗಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments