Homeದೇಶಕರ್ನಾಟಕ ಮತ್ತು ಬಿಹಾರ ವಿಧಾನ ಪರಿಷತ್‌ ಚುನಾವಣೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಮತ್ತು ಬಿಹಾರ ವಿಧಾನ ಪರಿಷತ್‌ ಚುನಾವಣೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಮತ್ತು ಬಿಹಾರ ವಿಧಾನ ಪರಿಷತ್‌ನ ದೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ.

ಬಿಹಾರದಲ್ಲಿ ಒಂಬತ್ತು ಮತ್ತು ಕರ್ನಾಟಕದ ಏಳು ಸ್ಥಾನಗಳಲ್ಲಿ ದೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಜೂನ್ 18ರಂದು ಮತದಾನ ನಡೆಯಲಿದೆ. ಬಿಹಾರ ಹಾಗೂ ಕರ್ನಾಟಕದ ವಿಧಾನ ಪರಿಷತ್‌ನ 16 ಸದಸ್ಯರ ಅವಧಿಯು ಅನುಕ್ರಮವಾಗಿ ಜೂನ್ 28 ಹಾಗೂ 30ರಂದು ಮುಕ್ತಾಯಗೊಳ್ಳಲಿದೆ.

ವಿಧಾನ ಪರಿಷತ್ ಸದಸ್ಯರಾದ ಗೋವಿಂದ ರಾಜು, ನಾಸೀರ್ ಅಹ್ಮದ್, ಎನ್. ನಾಗರಾಜು (ಎಂ.ಟಿ.ಬಿ), ಪ್ರತಾಪ ಸಿಂಹ ನಾಯಕ್‌ ಕೆ, ತಿಪ್ಪಣ್ಣಪ್ಪ, ಸುನಿಲ್ ವಲ್ಯಾಪುರ ಹಾಗೂ ಬಿ.ಕೆ. ಹರಿಪ್ರಸಾದ್ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ.

ಚುನಾವಣೆ ವೇಳಾಪಟ್ಟಿ:
ಚುನಾವಣೆ ಅಧಿಸೂಚನೆ: 01 ಜೂನ್ 2026
ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: 08 ಜೂನ್ 2026
ನಾಮಪತ್ರ ಪರಿಶೀಲನೆ: 09 ಜೂನ್ 2026
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: 11 ಜೂನ್ 2026
ಮತದಾನ: 18 ಜೂನ್ 2026
ಮತ ಎಣಿಕೆ: 18 ಜೂನ್ 2026

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments