Homeಕರ್ನಾಟಕಬೀದಿದೀಪ ನಿರ್ಲಕ್ಷ್ಯಕ್ಕೆ ಗುತ್ತಿಗೆದಾರರಿಗೆ 13 ಲಕ್ಷ ರೂ. ದಂಡ : ಕೃಷ್ಣ ಭೈರೇಗೌಡ

ಬೀದಿದೀಪ ನಿರ್ಲಕ್ಷ್ಯಕ್ಕೆ ಗುತ್ತಿಗೆದಾರರಿಗೆ 13 ಲಕ್ಷ ರೂ. ದಂಡ : ಕೃಷ್ಣ ಭೈರೇಗೌಡ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ಲೋಪವೆಸಗಿದ ಗುತ್ತಿಗೆದಾರರಿಗೆ ಒಟ್ಟು 13,00,753 ರೂಪಾಯಿ ದಂಡ ವಿಧಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವ ಶ್ರೀ ಕೃಷ್ಣ ಭೈರೇಗೌಡರ ಆದೇಶ ಮತ್ತು ದಕ್ಷಿಣ ನಗರ ಪಾಲಿಕೆ ಆಯುಕ್ತ ಶ್ರೀ ಕೆ. ಎನ್. ರಮೇಶ್‌ರ ನಿರ್ದೇಶನದಂತೆ ರಾತ್ರಿ ವೇಳೆ ಬೀದಿದೀಪಗಳ ತಪಾಸಣೆ ನಡೆಸಲಾಗಿತ್ತು. ಎಲ್‌ಇಡಿ ಬೀದಿದೀಪಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಗುತ್ತಿಗೆ ಸಂಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡದೇ ಇರುವುದು ಕಂಡುಬಂದಿದೆ.

ಸೆಪ್ಟೆಂಬರ್ 1ರಿಂದ 23ರವರೆಗೆ ‘ಸಹಾಯ’ ಆ್ಯಪ್ ಮೂಲಕ ಸಾರ್ವಜನಿಕರು ದಾಖಲಿಸಿದ ದೂರುಗಳನ್ನು ಪರಿಶೀಲಿಸಿದಾಗ, ಗುತ್ತಿಗೆದಾರರ ಸಿಬ್ಬಂದಿ ನಿಯಮಿತ ಪರಿಶೀಲನೆ ಮತ್ತು ದುರಸ್ತಿ ಕಾರ್ಯ ನಡೆಸದೇ ಇರುವುದು ಸ್ಪಷ್ಟವಾಗಿದೆ. ಹಲವಾರು ಬೀದಿದೀಪಗಳು ಕಾರ್ಯನಿರ್ವಹಿಸದೇ ಇದ್ದು, ಕತ್ತಲೆ ಪ್ರದೇಶಗಳು (ಡಾರ್ಕ್ ಸ್ಪಾಟ್‌ಗಳು) ಉಂಟಾಗಿರುವುದು ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಧಕ್ಕೆ ತಂದಿದೆ.

ದಂಡದ ವಿವರ:

  • M/s. Effilume Pvt. Ltd. – ₹3,29,199
  • M/s. Spectrum Tool Engineers Pvt. Ltd. – ₹9,56,955
  • M/s. Transglobal Power Ltd. – ₹14,599
    ಒಟ್ಟು: ₹13,00,753

ಆಯುಕ್ತರು ಸಂಬಂಧಪಟ್ಟ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಕತ್ತಲೆ ಪ್ರದೇಶಗಳನ್ನು ಕೂಡಲೇ ನಿವಾರಿಸಿ, ಹಾಳಾಗಿರುವ ಎಲ್ಲಾ ಎಲ್‌ಇಡಿ ಬೀದಿದೀಪಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿರ್ಲಕ್ಷ್ಯ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments