Homeಕರ್ನಾಟಕಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಯೋಗೇಶ್ವರ್ ಅಚ್ಚರಿ ಹೇಳಿಕೆ

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಯೋಗೇಶ್ವರ್ ಅಚ್ಚರಿ ಹೇಳಿಕೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಂಗಳವಾರ ಕುಮಾರಸ್ವಾಮಿ ನಿವಾಸದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರ ನಡುವೆ ಗಂಭೀರ ಚರ್ಚೆ ನಡೆದಿದ್ದು, ಈ ಸಭೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮತ್ತು ದೇವೇಗೌಡರ ಅಳಿಯ ಡಾ. ಸಿ ಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ದೆಹಲಿಯಲ್ಲಿ ಬುಧವಾರ ಅಚ್ಚರಿ ಹೇಳಿಕೆ ನೀಡಿದ್ದಾರೆ.

“ಬೆಂಗಳೂರು ಗ್ರಾಮಾಂತರಕ್ಕೆ ಅಭ್ಯರ್ಥಿಗಳ ಕೊರತೆ ಇಲ್ಲ. ಪಕ್ಷದಲ್ಲಿ ಸಾಕಷ್ಟು ಪ್ರಬಲ ನಾಯಕರಿದ್ದಾರೆ. ಅಶ್ವತ್ಥನಾರಾಯಣ ಡಿಸಿಎಂ ಆಗಿದ್ದವರು, ಉಸ್ತುವಾರಿ ಸಚಿವರಾಗಿದ್ದರು. ಇನ್ನು ಆರ್ ಅಶೋಕ್ ವಿರೋಧ ಪಕ್ಷದ ನಾಯಕರು ಸ್ಪರ್ಧಿಸಲು ಸಮರ್ಥರಿದ್ದಾರೆ. ಅವರೂ ಸಹ ಬೆಂಗಳೂರು ಗ್ರಾಮಾಂತರಿಂದ ಸ್ಪರ್ಧೆ ಮಾಡಬಹುದು” ಎಂದು ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಿ ಕೆ ಸುರೇಶ್​ ವಿರುದ್ಧ ಬಿಜೆಪಿಯಿಂದ ಡಾ. ಸಿ ಎನ್ ಮಂಜುನಾಥ್​ ಕಣಕ್ಕಿಳಿಸಬೇಕೆಂಬ ಚರ್ಚೆಗಳು ನಡುವೆ, ಪಿ ಯೋಗೇಶ್ವರ್ ಹೇಳಿಕೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಿ ಕೆ ಸುರೇಶ್ ಅವರನ್ನು ಸೋಲಿಸಲು ಲೆಕ್ಕಾಚಾರ ಹಾಕಿದ್ದಾರೆ. ಮೊದಲಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ ಪಿ ಯೋಗೇಶ್ವರ್ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಇತ್ತು. ಇದನ್ನು ಅವರೇ ತಳ್ಳಿ ಹಾಕಿದ್ದಾರೆ.

“ಎರಡು ದಿನಗಳಲ್ಲಿ ಅಭ್ಯರ್ಥಿ ಯಾರು ಎನ್ನುವುದು ಗೊತ್ತಾಗಲಿದೆ. ನಾನು ಮಂಜುನಾಥ್ ಅವರನ್ನು ಒಪ್ಪಿಸುವ ಕೆಲಸ ಮಾಡಿದ್ದು. ಅಂತಿಮವಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕು. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ನಾನು ರಾಜ್ಯ ರಾಜಕಾರಣದಲ್ಲಿ ಇರಬೇಕು ಎಂದುಕೊಂಡಿದ್ದೇನೆ. ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೆ ನೋಡೋಣ” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments