ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣ ವಿಚಾರಣೆ ನಡೆಸಿದ್ದ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿತು. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ನಾಳೆ ಪ್ರಕಟಿಸಲಿದೆ.
21 ಆರೋಪಿಗಳ ಪೈಕಿ 17 ಮಂದಿ ದೋಷಿಗಳಾಗಿದ್ದಾರೆ. 20ನೇ ಆರೋಪಿ ವಾಸುದೇವ ನಿಲಕೇಣಿ, 21ನೇ ಆರೋಪಿ ಸೋಮಶೇಕರ್ ನ್ಯಾಮಗೌಡ ಅವರನ್ನು ಕೋರ್ಟ್ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ. ಎಲ್ಲಾ ದೋಷಿಗಳನ್ನು ಕಸ್ಟಡಿಗೆ ಪಡೆಯುವಂತೆ ಕೋರ್ಟ್ ಸಿಬಿಐಗೆ ಸೂಚಿಸಿದೆ. ಎ-1 ಬಸವರಾಜ್ ಮುತ್ತಗಿ ಮತ್ತು ಎ17 – ಶಿವಾನಂದ ಬಿರಾದರ್ ಸರ್ಕಾರಿ ಸಾಕ್ಷಿಗಳಾಗಿರುವ ಕಾರಣ ಅವರನ್ನು ಕೋರ್ಟ್ ನಿರ್ದೋಷಿ ಎಂದು ಹೇಳಿದೆ.
ಸಿಆರ್‌ಪಿಸಿ ಸೆಕ್ಷನ್ 302 (ಕೊಲೆ), 120B (ಕ್ರಿಮಿನಲ್ ಪಿತೂರಿ), ಸೆಕ್ಷನ್ 201 (ಸಾಕ್ಷ್ಯ ನಾಶ), ಸೆಕ್ಷನ್ 148 (ಮಾರಕಾಸ್ತ್ರಗಳೊಂದಿಗೆ ಗಲಭೆ), ಸೆಕ್ಷನ್ 149 (ಸಾಮಾನ್ಯ ಉದ್ದೇಶ) ಅಡಿ ಆರೋಪಗಳು ಸಾಬೀತಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಯಾರೆಲ್ಲ ದೋಷಿಗಳು?
ಎ2 – ವಿಕ್ರಂ, ಎ3 – ಕೀರ್ತಿಕುಮಾರ್, ಎ4 – ಸಂದೀಪ್, ಎ5 – ವಿನಾಯಕ, ಎ6 – ಮಹಾಬಲೇಶ್ವರ, ಎ7- ಸಂತೋಷ, ಎ8 – ದಿನೇಶ್, ಎ9 – ಅಶ್ವಥ್, ಎ10 – ಸುನೀಲ್, ಎ11- ನಜೀರ್ ಅಹ್ಮದ್, ಎ12 -ಶಾನವಾಝ್, ಎ13 – ನೂತನ್, ಎ14 – ಹರ್ಶಿತ್, ಎ15 – ವಿನಯ ಕುಲಕರ್ಣಿ, ಎ16 – ಚಂದ್ರಶೇಖರ್ ಇಂಡಿ, , ಎ18 – ವಿಕಾಸ್ ಕಲಬುರಗಿ, ಎ19 – ಚನ್ನಕೇಶವ ಟಿಂಗರಿಕರ್
2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರಿಂದ ಹೈ ಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು.
ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು.


