Homeಕರ್ನಾಟಕನಾವು ಅಕ್ಕಿ ಕೇಳಿದ್ರೂ ಅಕ್ಕಿ ಕೊಡಲಿಲ್ಲ, ಈಗ ರಾಜಕೀಯಕ್ಕಾಗಿ ಕೇಂದ್ರದಿಂದ 'ಭಾರತ್ ಅಕ್ಕಿ' ವಿತರಣೆ: ಸಚಿವ...

ನಾವು ಅಕ್ಕಿ ಕೇಳಿದ್ರೂ ಅಕ್ಕಿ ಕೊಡಲಿಲ್ಲ, ಈಗ ರಾಜಕೀಯಕ್ಕಾಗಿ ಕೇಂದ್ರದಿಂದ ‘ಭಾರತ್ ಅಕ್ಕಿ’ ವಿತರಣೆ: ಸಚಿವ ಮುನಿಯಪ್ಪ

ರಾಜಕೀಯಕ್ಕಾಗಿ ಭಾರತ್ ಅಕ್ಕಿಯನ್ನು ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದೆ. ದೇಶದಲ್ಲಿ 40 ರೂ.ಗಿಂತ ಕಡಿಮೆ‌ ಅಕ್ಕಿ ಇಲ್ಲ. ಜನರ ಅಕ್ಕಿಯನ್ನು 39 ರೂ.ಗೆ ಖರೀದಿಸಿ 19 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಒಂದು ಕೆ.ಜಿಗೆ 20 ರೂ. ಲಾಸ್ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಆರೋಪಿಸಿರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೇಂದ್ರ ಸರ್ಕಾರದಿಂದ ಜನರಿಗೆ ಭಾರತ್​ ಅಕ್ಕಿ ವಿತರಣೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಇವರು ಅಕ್ಕಿಯನ್ನು ಕೊಡಲಿ, ಆದರೆ ಲಾಸ್ ಆಗದಂತೆ ನೀಡಲಿ. ಅಕ್ಕಿ ಕೊಡಿ ಹಣ ಕೊಡುತ್ತೇವೆ ಅಂತಾ ಕೇಳಿದರೂ ನಮಗೆ ಕೊಡಲಿಲ್ಲ. ದೇಶದ ಬೊಕ್ಕಸ, ಜನರ ಹಣಕ್ಕೆ ಒಂದು ಇತಿಮಿತಿ ಇರಬೇಕು” ಎಂದರು.

“ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿ, ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನೂ ಜಾರಿಗೊಳಿಸಿದರು. ಕೇಂದ್ರದ 5 ಕೆಜಿ ಜತೆ ತಾವೂ ಐದು ಕೆಜಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಸಿಗದ ಕಾರಣಕ್ಕೆ ಇದುವರೆಗೂ ಅಕ್ಕಿ ಕೊಡಲಾಗಿಲ್ಲ. ಅದರ ಬದಲಿಗೆ ತಲಾ 170 ರೂ. ಹಣ ನೀಡುತ್ತಿದ್ದೇವೆ” ಎಂದರು.

“ಬಿಪಿಎಲ್‌ ಕಾರ್ಡ್‌ನ ಪ್ರತಿ ಫಲಾನುಭವಿ ಖಾತೆಗೆ ಪ್ರತಿ ತಿಂಗಳು 170 ರೂಪಾಯಿಯಂತೆ ಹಣ ಹಾಕುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ಜನರ ಖಾತೆಗೆ ಬರೋಬ್ಬರಿ 3,751 ಕೋಟಿ ರೂ. ಹಣ ವರ್ಗಾವಣೆ ಮಾಡಿದೆ. ಇನ್ನು ಎರಡು ಸರ್ವೇಗಳಲ್ಲಿ ಅಕ್ಕಿ ಬಗ್ಗೆಯೇ ಹೆಚ್ಚಿನ ಜನ ಒಲವು ತೋರಿಸಿದ್ದಾರೆ. ಹೀಗಾಗಿ ಮತ್ತೆ ಅಕ್ಕಿ ಖರೀದಿಗೆ ಸರ್ಕಾರ ಪ್ರಯತ್ನ ಆರಂಭಿಸಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments