ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ 2026ನೇ ಸಾಲಿನ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಕಥೆಗಾರ, ಪ್ರಜಾವಾಣಿಯ ಹಿರಿಯ ಪತ್ರಕರ್ತ ರಘುನಾಥ ಚ.ಹ. ಅವರ ‘ಇಲ್ಲಿಂದ ಮುಂದೆಲ್ಲ ಕಥೆ ಕಥಾಸಂಕಲನವು ಆಯ್ಕೆಯಾಗಿದೆ.
2025ನೇ ಸಾಲಿನಲ್ಲಿ ಪ್ರಕಟವಾದ ಕಥಾಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ಒಟ್ಟು 83 ಕೃತಿಗಳು ಸ್ಪರ್ಧೆಗೆ ಬಂದಿದ್ದವು ಎಂದು ಪ್ರತಿಷ್ಠಾನ ಹೇಳಿಕೆ ಬಿಡುಗಡೆ ಮಾಡಿದೆ.
ಡಾ. ನಿತ್ಯಾನಂದ ಶೆಟ್ಟಿ, ಡಾ. ಎಂ. ಉಷಾ ಹಾಗೂ ಎ.ಎಂ. ರವಿ ಅವರು ಅವರು ತೀರ್ಪುಗಾರರ ಸಮಿತಿಯಲ್ಲಿದ್ದರು. ಪ್ರಶಸ್ತಿಯು ₹50,000 ನಗದು, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರ ಹೊಂದಿದ್ದು, ಇದೇ ವರ್ಷ ಜೂನ್ 14ರಂದು ಮಂಡ್ಯದಲ್ಲಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದೆ.


