Homeಕರ್ನಾಟಕಪರಿಷತ್ ಚುನಾವಣೆ | ಸಿಎಂ ಡಿ ಕೆ ಶಿವಕುಮಾರ್ ತಂತ್ರ ಯಶಸ್ವಿ, 5 ಸ್ಥಾನ ಗೆದ್ದ...

ಪರಿಷತ್ ಚುನಾವಣೆ | ಸಿಎಂ ಡಿ ಕೆ ಶಿವಕುಮಾರ್ ತಂತ್ರ ಯಶಸ್ವಿ, 5 ಸ್ಥಾನ ಗೆದ್ದ ಕಾಂಗ್ರೆಸ್

ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿವೆ. ಜೆಡಿಎಸ್‌ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.

ಸಿಎಂ ಡಿ ಕೆ ಶಿವಕುಮಾರ್ ಅವರ ತಂತ್ರ ಫಲಿಸಿದ್ದು, ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ ನಿರೀಕ್ಷೆಗಿಂತ ಒಂದು ಹೆಚ್ಚುವರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಗೆಲುವಿಗೆ ತಲಾ 28 ಮತಗಳ ಅಗತ್ಯವಿದ್ದು, ಬಿ.ಕೆ. ಹರಿಪ್ರಸಾದ್ ಹಾಗೂ ರಘು ಕೌಟಿಲ್ಯ ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಬೆಳಿಗ್ಗೆ 9 ರಿಂದ ಮತದಾನ ಆರಂಭವಾಯಿತು. ಸಂಜೆ ಮತ ಎಣಿಕೆ ನಡೆಯಿತು. ಸಂಖ್ಯಾಬಲ ಆಧರಿಸಿ ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ಇತ್ತು. ಕೊನೆಗೆ ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್ ಕಾರ್ತಿಕ್‌ ಗೆಲುವು ಸಾಧಿಸಿದ್ದು, ಜೆಡಿಎಸ್‌ನ ಗೋವಿಂದರಾಜು ಸೋತಿದ್ದಾರೆ.

ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ.ವಿ ಮೋಹನ್, ವಿನಯ್ ಕಾರ್ತಿಕ್‌, ಶಿವಣ್ಣ ಮಳವಳ್ಳಿ ಸೇರಿ 5 ಮಂದಿ ಗೆಲುವು ಸಾಧಿಸಿ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.. ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ವಿಜಯಶಾಲಿಗಳಾಗಿ ಪರಿಷತ್‌ಗೆ ಕಾಲಿಟ್ಟಿದ್ದಾರೆ.

ಯಾರಿಗೆ ಎಷ್ಟು ಮತ?

  • ಬಿಕೆ ಪರಿಪ್ರಸಾದ್‌ – 30 (ಕಾಂಗ್ರೆಸ್)
  • ತಿಪ್ಪಣ್ಣಪ್ಪ ಕಾಮಕನೂರ್ – 30 (ಕಾಂಗ್ರೆಸ್)
  • ಪಿ ವಿ ಮೋಹನ್ – 29 (ಕಾಂಗ್ರೆಸ್)
  • ಶಿವಣ್ಣ ಮಳವಳ್ಳಿ – 30 (ಕಾಂಗ್ರೆಸ್)
  • ವಿನಯ್ ಕಾರ್ತಿಕ್‌ – 32 (ಕಾಂಗ್ರೆಸ್)
  • ರಘು ಕೌಟಿಲ್ಯ – 29 (ಬಿಜೆಪಿ)
  • ಲಿಂಗರಾಜ್ ಪಾಟೀಲ್ – 27 (ಬಿಜೆಪಿ)
  • ಗೋವಿಂದ ರಾಜು – 14 (ಜೆಡಿಎಸ್)
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments