Homeಕರ್ನಾಟಕಲೋಕಸಭೆ ಕ್ಷೇತ್ರ ಗೆಲ್ಲಿಸಿಕೊಂಡು ಬರದ ಸಚಿವರು ಅಸಮರ್ಥರು: ಸಚಿವ ಬಿ. ನಾಗೇಂದ್ರ

ಲೋಕಸಭೆ ಕ್ಷೇತ್ರ ಗೆಲ್ಲಿಸಿಕೊಂಡು ಬರದ ಸಚಿವರು ಅಸಮರ್ಥರು: ಸಚಿವ ಬಿ. ನಾಗೇಂದ್ರ

ಜವಾಬ್ದಾರಿ ಕೊಟ್ಟ ಲೋಕಸಭೆ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರದೇ ಇದ್ದಲ್ಲಿ ಅವರು ಅಸಮರ್ಥ ಸಚಿವರಾಗುತ್ತಾರೆ. ಡಾ. ಜಿ ಪರಮೇಶ್ವರ್ ಹೇಳಿದ್ದು ನಿಜ, ಎಲ್ಲರ ಕಾರ್ಯಕ್ಷಮತೆಯನ್ನು ಹೈಕಮಾಂಡ್‌ ಗಮನಿಸುತ್ತದೆ ಎಂದು ಸಚಿವ ಬಿ. ನಾಗೇಂದ್ರ ಹೇಳಿದರು

ಬಳ್ಳಾರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಮೀಟಿಂಗ್‌ನಲ್ಲಿ ಸಚಿವರಿಗೆ ಎಚ್ಚರಿಕೆ ಕೊಡಲಾಗಿದೆ. ಮಂತ್ರಿಗಿರಿ ಕೊಟ್ಟು ಆಯಾ ಕ್ಷೇತ್ರದ ಲೋಕಸಭೆ ಅಭ್ಯರ್ಥಿ ಗೆಲ್ಲಿಸಿಕೊಂಡ ಬರದೇ ಇದ್ದರೆ ಹೇಗೆ? ಗೆಲ್ಲಿಸಿಕೊಂಡು ಬರದೇ ಹೋದರೆ ಕೊಟ್ಟ ಕುದುರೆ ಏರದವನು ಶೂರನು ಅಲ್ಲ ವೀರನು ಅಲ್ಲ ಎನ್ನುವಂತಾಗುತ್ತದೆ” ಎಂದರು

ಗೆಲ್ಲಿಸಿಕೊಂಡು ಬರದೇ ಇದ್ದರೆ ಸಚಿವ ಸ್ಥಾನ ಕಳೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದಾಗ, “ಸಮರ್ಥರಲ್ಲ ಅವರು ಅಸಮರ್ಥರು ಅಷ್ಟೇ. ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಸಚಿವರ ಜೊತೆಗೆ ಅಯಾ ಶಾಸಕರ ಜವಾಬ್ದಾರಿಯೂ ಆಗಿರುತ್ತದೆ” ಎಂದರು.

ಸಚಿವರಾದ ಮೇಲೆ ಬಳ್ಳಾರಿ ಗೆಲ್ಲಿಸಿಕೊಂಡು ಬರುವ ಸಂಕಲ್ಪ ತೊಟ್ಟಿದ್ದೇನೆ. ಸಚಿವ ಹೇಳಿದ ಅಭ್ಯರ್ಥಿ ಫೈನಲ್ ಅಲ್ಲ, ಸ್ಥಳೀಯ ಶಾಸಕರ ಅಭಿಪ್ರಾಯ ಕಡ್ಡಾಯವಾಗಿದೆ. ನಾವು ಬಳ್ಳಾರಿ ಗೆದ್ದು ಸೋನಿಯಾ ಗಾಂಧಿಯವರಿಗೆ ಉಡುಗೊರೆಯಾಗಿ ಕೊಡುತ್ತೇವೆ” ಎಂದು ಹೇಳಿದರು.

ಬಳ್ಳಾರಿಯಿಂದ ಐದು ಜನ ಟಿಕೆಟ್ ಆಕಾಂಕ್ಷಿ ಇದ್ದಾರೆ.ವೆಂಕಟೇಶ್ ಪ್ರಸಾದ್, ಮುರುಳಿ ಕೃಷ್ಣ, ಉಗ್ರಪ್ಪ, ಗುಜ್ಜಲ್ ನಾಗರಾಜ ಅರ್ಜಿ ಹಾಕಿದ್ದಾರೆ. ಆದರೆ, ನಾವು ಒಮ್ಮತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ” ಎಂದು ನಾಗೇಂದ್ರ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments