Homeಕರ್ನಾಟಕಮೋದಿ ಸರ್ಕಾರದ ಕರ್ಮಕಾಂಡಗಳ ಬಗ್ಗೆಯೂ ಸಿನೆಮಾ ಆಗಲಿ: ಸಂತೋಷ್ ಲಾಡ್

ಮೋದಿ ಸರ್ಕಾರದ ಕರ್ಮಕಾಂಡಗಳ ಬಗ್ಗೆಯೂ ಸಿನೆಮಾ ಆಗಲಿ: ಸಂತೋಷ್ ಲಾಡ್

ನಿರ್ದೇಶಕ ಆದಿತ್ಯ ಧರ್ ಅವರು ಈಗಾಗಲೇ ‘ಧುರಂಧರ್’ ಸರಣಿಯ ಸಿನಿಮಾಗಳನ್ನು ಮಾಡಿದ್ದಾರೆ. ನಾನು ಅವರಿಗೆ ಒಂದು ವಿಶೇಷ ಮನವಿ ಮಾಡುತ್ತಿದ್ದೇನೆ. ಅವರು ದಯವಿಟ್ಟು ‘ವ್ಯಾಪಂ’ ಹಗರಣದ ಕುರಿತೂ ಒಂದು ಚಿತ್ರ ನಿರ್ಮಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅದೊಂದು ಅತ್ಯಂತ ರೋಚಕವಾದ ಹಗರಣವಾಗಿದ್ದು, ಸಿನಿಮಾ ಮಾಡಲು ಸೂಕ್ತವಾದ ಕಥಾವಸ್ತುವನ್ನು ಹೊಂದಿದೆ ಎಂದು ಚಾಟಿ ಬೀಸಿದದ್ದಾರೆ. ಪರೀಕ್ಷಾ ಅಕ್ರಮಗಳ ವಿಚಾರದಲ್ಲಿ ಕೇಂದ್ರದ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಸಚಿವರು ಈ ರೀತಿಯಾಗಿ ಸಿನಿಮಾ ವಿಚಾರವನ್ನು ಎಳೆದು ತಂದು ಟಾಂಗ್ ನೀಡಿದ್ದಾರೆ.

ಇನ್ನೂ ಮೋದಿ ರೋಡ್ ಶೋ ಸಂಬಂಧ ವ್ಯಂಗ್ಯವಾಡಿದ ಸಂತೋಷ್ ಲಾಡ್, ಮೋದಿ ಸಾಹೇಬರು ಎಲ್ಲಿ ರೋಡ್ ಶೋ ಮಾಡಿದರೂ ಅಲ್ಲಿ ಆ್ಯಂಬುಲೆನ್ಸ್ ಬರುತ್ತೆ. ಅದು ಹೇಗೆ ತಿಳಿಯುತ್ತದೋ ಗೊತ್ತಾಗುವುದಿಲ್ಲ. ಪ್ರತಿ ರೋಡ್ ಶೋ ವೇಳೆ ಆ್ಯಂಬುಲೆನ್ಸ್ ಬರುತ್ತೆ… ಆವಾಗ ಮೋದಿ ದಾರಿ ಮಾಡಿಕೊಡುತ್ತಾರೆ. ಇದು ಮೊದಲೆ ಪ್ಲಾನ್ ಆಗಿರುತ್ತೆ ಎಂದು ಲೇವಡಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments