Homeಕರ್ನಾಟಕಕೋಲಾರ | ಜಿಲ್ಲಾಡಳಿತ ಕೇಂದ್ರದಲ್ಲೇ ದುರ್ವಾಸನೆ ಬೀರುತ್ತಿರುವ ಇಂದಿರಾ ಕ್ಯಾಂಟೀನ್!

ಕೋಲಾರ | ಜಿಲ್ಲಾಡಳಿತ ಕೇಂದ್ರದಲ್ಲೇ ದುರ್ವಾಸನೆ ಬೀರುತ್ತಿರುವ ಇಂದಿರಾ ಕ್ಯಾಂಟೀನ್!

ಕೋಲಾರ: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಇಂದಿರಾ ಕ್ಯಾಂಟೀನ್ ಸನಿಹದಲ್ಲೇ ಒಂದು ಕಡೆ ಮಿನಿ ವಿಧಾನಸೌಧ ಮತ್ತೊಂದು ಕಡೆ ಸ್ಥಳೀಯ ನಗರ ಸಭೆಗೆ ಇಷ್ಟೆಲ್ಲಾ ಇದ್ದರೂ ಇಂದಿರಾ ಕ್ಯಾಟೀನ್‌ ಬಗ್ಗೆ ಯಾವುದೇ ಕಾಳಜಿ ವ್ಯಕ್ತವಾಗುತ್ತಿಲ್ಲ.

ಈ ಹಿಂದೆ ಇದೇ ಸಿದ್ಧರಾಮಯ್ಯ ಸರ್ಕಾರವಿದ್ದಾಗ ಬಡವರು ಹಾಗೂ ಶ್ರಮಿಕರಿಗೆ ಕಡಿಮೆ ದರದಲ್ಲಿ ಕೈಗೆಟುಕಲೆಂದೇ ರೂಪಿಸಲಾಗಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಸಿದ್ಧರಾಮಯ್ಯನವರ ಸರ್ಕಾರ ಬಂದರೂ ಇದರ ಸ್ಥಿತಿ ಸುಧಾರಿಸುವುದಿರಲಿ ಕನಿಷ್ಠ ನೀಡುವ ಊಟ ಉಪಹಾರವೂ ತಿನ್ನಲಾಗಂತಹ ಸ್ಥಿತಿಗೆ ಬಂದು ತಲುಪಿದೆ.

ಕಾಟಾಚಾರಕ್ಕೆ ನೀಡಲಾಗುತ್ತಿರುವ ಊಟ ಉಪಹಾರವನ್ನು ತಿನ್ನುತ್ತಿರುವ ಒಂದಷ್ಟು ಮಂದಿ ಪ್ರತಿ ನಿತ್ಯ ಶಪಿಸುತ್ತಲೇ ತಿನ್ನುತ್ತಿದ್ದಾರುವುದು ಒಂದು ಕಡೆಯಾದರೆ ಕ್ಯಾಂಟೀನ್ ಹೋಗಲು ರಸ್ತೆಯೂ ಇಲ್ಲದಂತೆ ಸುತ್ತ ಮುತ್ತಲೆಲ್ಲಾ ಬಿಸಿಡಿದ ಕಸದ ರಾಶಿ ಹಾಗೂ ಅನಧಿಕೈತ ಅಂಗಡಿಗಳು ರಾಜಾರೋಷವಾಗಿಯೇ ತಲೆ ಎತ್ತಿದೆ. ಆಡಳಿತ ವ್ಯವಸ್ಥೆಯನ್ನೇ ಇದು ಅಣಕಿಸುತ್ತಿದೆ.

ದುರಂತವೆಂದರೆ ಪ್ರಾರಂಭದಲ್ಲಿ ಒಂದಷ್ಟು ಜನ ಮನ್ನಣೆ ಪಡೆದಿದ್ದ ಇಂದಿರಾ ಕ್ಯಾಂಟೀನ್ ಇದೀಗ ಅದೇ ಸಿದ್ಧರಾಮಯ್ಯನವರ ಸರ್ಕಾರ ಆಡಳಿತದಲ್ಲಿದ್ದರೂ ಈ ಇಂದಿರಾ ಕ್ಯಾಂಟೀನ್‌ ಇಷ್ಟು ನಿರ್ಲಕ್ಷ್ಯಕ್ಕೆ ಒಳಾಗಿರುವುದು ದರುಂತವೇ ಸರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments