ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರತಿ ವರ್ಷ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ನೀಡಲಾಗುತಿದ್ದು 2025ನೇ ಸಾಲಿನ ಬಹುಮಾನಗಳ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದ್ದಾರೆ.
ಇದರ ಜೊತೆಗೆ ವಾರ್ಷಿಕ ಪ್ರಶಸ್ತಿ ಹಾಗೂ ಗೌರವಗಳನ್ನೂಸಹ ನೀಡಲಾಗುವುದು. ಅವುಗಳ ಆಯ್ಕೆ ಶೀಘ್ರದಲ್ಲಿ ನಡೆಸಲಾಗುವುದು, ಈ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಆಗಸ್ಟ್ ತಿಂಗಳಿನಲ್ಲಿ ಆಯೋಜಿಸಲಾಗುವ ಪ್ರಶಸ್ತಿ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
2025ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳ ವಿವರ
ಪುಸ್ತಕ ಸೊಗಸು ಪ್ರಥಮ ಬಹುಮಾನ
ರೂ.25,000-00 ,
ಕೃತಿ: ಯುದ್ಧ ಮೃದಂಗ
ಅನು: ದೇವೂ ಮಾಕೊಂಡ. ಬೆರಗು ಪ್ರಕಾಶನ
ಕಡಣಿ, ತಾ: ಅಲಮೇಲ
ವಿಜಯಪುರ ಜಿಲ್ಲೆ
ಪುಸ್ತಕ ಸೊಗಸು ದ್ವಿತೀಯ ಬಹುಮಾನ
ರೂ.20,000-00.
ಕೃತಿ -ಶಿಲ್ಪಕಲೆಯಲ್ಲಿ ರಾಮಾಯಣ ಪುಂಡಲೀಕ ಕಲ್ಲಿಗನೂರ,
ವೀರಲೋಕ
ಚಾಮರಾಜಪೇಟೆ,
ಬೆಂಗಳೂರು.
ಪುಸ್ತಕ ಸೊಗಸು ತೃತೀಯ ಬಹುಮಾನ
ರೂ.10,000-00 ,
ಕೃತಿ_ನೋರಾಳಿಂದ ಗುಲಾಬಿ ಗ್ಯಾಂಗ್ವರೆಗೆ
ಚಂಪಾವತಿ ಎಚ್.ಎಸ್.
ಮಾನಸ ಪ್ರಕಾಶನ
ಚಾಮರಾಜಪೇಟೆ
ಬೆಂಗಳೂರು.
ಮಕ್ಕಳ ಪುಸ್ತಕ ಸೊಗಸು ಬಹುಮಾನ
ರೂ.8,000-00
ಕೃತಿ ಗೂಡು ಸೇರಿದ ಹಕ್ಕಿಗಳು ಬಿ.ಎ. ಮಮತಾ ಅರಸೀಕೆರೆ ಸಮನ್ವಯ ಪ್ರಕಾಶನ
ಅರಸೀಕರೆರೆ, ಹಾಸನ
ಹಾಗೂ
ಕೃತಿ- ಮಾತನಾಡದ ಚುಕ್ಕಿ ಶೇಖರಯ್ಯ ಟಿ.ಎಚ್.ಎಂ. ಶೇಖರಯ್ಯ ,
ಗೆದ್ದಲಗಟ್ಟೆ (ಅಂಚೆ)
ಕೂಡ್ಲಿಗಿ ತಾ||, ವಿಜಯನಗರ ಜಿಲ್ಲೆ
ಮುಖಪುಟ ಚಿತ್ರ ವಿನ್ಯಾಸ ಬಹುಮಾನ
ರೂ.10,000-00 ,
ಕೃತಿದರ್ವೇಶಿ ಪದ್ಯ
ಎ.ಎಸ್. ಮಕಾನದಾರ
ಬಹುಮಾನಿತ ಕಲಾವಿದರು:
ಶ್ರೀ ಈಶ್ವರ ಬಡಿಗೇರ, ಧಾರವಾಡ
ಮುಖಪುಟ ಚಿತ್ರ ಕಲೆಯ ಬಹುಮಾನ
ರೂ.8,000-00
ಕೃತಿ -ಗ್ರಾಮ ಗೀತೆಗಳು ,
ಡಾ. ಅಪ್ಪಗೆರೆ ತಿಮ್ಮರಾಜು
ಬಹುಮಾನಿತ ಕಲಾವಿದರು :
ಶ್ರೀ ಶ್ರೀಪಾದ, ದಕ್ಷಿಣ ಕನ್ನಡ
ಪುಸ್ತಕ ಮುದ್ರಣ ಸೊಗಸು ಬಹುಮಾನ
ರೂ.5,000-00
ಕೃತಿ -ಅರಕಲಗೂಡು ಗತ ವೈಭವ ಸುಂದರೇಶ ಡಿ. ಉಡುವಾರೆ ಮುದ್ರಣಾಲಯ :
ಗುಪ್ತ ಪ್ರಿಂಟರ್ಸ್, ಮೈಸೂರು
ಆಯ್ಕೆ ಮಾಡಲಾದ ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ.


