Homeಕರ್ನಾಟಕ108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿ ಅಕ್ರಮ ಕುರಿತು ವಿಚಾರಣೆ: ದಿನೇಶ್‌ ಗುಂಡೂರಾವ್‌

108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿ ಅಕ್ರಮ ಕುರಿತು ವಿಚಾರಣೆ: ದಿನೇಶ್‌ ಗುಂಡೂರಾವ್‌

108 ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಆಯುಕ್ತರಿಗೆ ಸೂಚನೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ವಿಚಾರಣೆ ಬಳಿಕ ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ. ಜಿವಿಕೆ ಕಂಪನಿ ನಮಗೆ ಏಜೆನ್ಸಿ. ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಆ ಬಗ್ಗೆ ಸಾಕಷ್ಟು ಕುಂದುಕೊರತೆ, ಸಮಸ್ಯೆಗಳಿರುವುದು ಗಮನದಲ್ಲಿದೆ” ಎಂದರು.

ಆ್ಯಂಬುಲೆನ್ಸ್ ಚಾಲಕರ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ರಾಜ್ಯ ಆ್ಯಂಬುಲೆನ್ಸ್ ಚಾಲಕರ ಸಂಘ ಆರೋಪ ಮಾಡಿದೆ. ಅಹರ್ತೆ ಇಲ್ಲದ 250ಕ್ಕೂ ಹೆಚ್ಚು ಚಾಲಕರನ್ನ ನೇಮಕ ಮಾಡಿಕೊಂಡ GVK ಕಂಪನಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಒಬ್ಬೊಬ್ಬರಿಂದ 3 ಲಕ್ಷ ರೂ. ಪಡೆದು ನೇಮಕ ಮಾಡಿರುವ ಆರೋಪ ಕೇಳಿಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments