Homeರಾಜಕೀಯದೇಶದಲ್ಲಿ ಕಾಂಗ್ರೆಸ್‌ 20 ಸ್ಥಾನ ಗೆದ್ದರೆ ಅದೇ ಹೆಚ್ಚು: ಸಿ ಟಿ ರವಿ ಲೇವಡಿ

ದೇಶದಲ್ಲಿ ಕಾಂಗ್ರೆಸ್‌ 20 ಸ್ಥಾನ ಗೆದ್ದರೆ ಅದೇ ಹೆಚ್ಚು: ಸಿ ಟಿ ರವಿ ಲೇವಡಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಬೋನಸ್ ಅಗಿ ಒಂದೇರಡು ಕ್ಷೇತ್ರ ಗೆದ್ದಿದ್ದರು. ಈ ಸಲ ಅದು ಕೂಡ ಗೆಲ್ಲೋದಿಲ್ಲ. ದೇಶದಲ್ಲಿ 20 ಸ್ಥಾನ ಗೆದ್ದರೆ ಅದೇ ಹೆಚ್ಚು ಎಂದು ಸಿ ಟಿ ರವಿ ಹೇಳಿದರು.

ಬಳ್ಳಾರಿ ನಗರದ ಬಸವ ಭವನದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, “ಬಿಜೆಪಿ ದೇಶಾದ್ಯಂತ 400 ಸ್ಥಾನ ಗೆದ್ದೇ ಗೆಲ್ಲುತ್ತದೆ. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ” ಎಂದರು.

“ಇಂಡಿಯಾ ಒಕ್ಕೂಟ ಆರಂಭದಲ್ಲಿ ಒಂದೆರಡು ಮೀಟಿಂಗ್‌ನಲ್ಲಿ ದೊಡ್ಡ ಸದ್ದು ಮಾಡಿತ್ತು. ಮೂರನೇ ಮೀಟಿಂಗ್ ಡಮಾರ್ ಆಯ್ತು. ದೇಶದಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಸರ್ವಂ ರಾಮಮಯಂ ಆಗಿದೆ” ಎಂದರು.

“ಸಿದ್ದರಾಮಯ್ಯ ಕೂಡ ಜೈಶ್ರೀರಾಂ ಅನ್ನೋ ಹಾಗೇ ಅಯ್ತು. ನಲವತ್ತು ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳಿಲ್ಲ. ಸಿದ್ದರಾಮಯ್ಯ ಬಾಯಿಯಲ್ಲಿ ಜೈಶ್ರೀರಾಮ್ ಬಂದಿದೆ ಅಂದ್ರೇ ಕಾಂಗ್ರೆಸ್ ನವರಿಗೆ ಗೊತ್ತಾಗಿದೆ ಬಿಜೆಪಿ ಗೆಲ್ಲುತ್ತೆದೆ” ಎಂದು ಹೇಳಿದರು.

ಧ್ವಜ ವಿಚಾರವಾಗಿ ಮಾತನಾಡಿ, “ಮಂಡ್ಯ ವಿಚಾರದಲ್ಲಿ ಮಹಾ ಅಪರಾಧವಾಗಿದೆ. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜ ಹಾರಿಸಲು ಬೇಡ ಅಂದವರಾರು? ಹನುಮ ಧ್ವಜ ಇಳಿಸಿ ಹಾರಿಸಬೆಕಿತ್ತೇ? ಅದಕ್ಕಿಂತ ದೊಡ್ಡ ಸ್ಥಂಬದ ಮೇಲೆ ಎತ್ತರದ ರಾಷ್ಟ್ರದ ಧ್ವಜ ಹಾರಿಸಿ. ಹನುಮ ಧ್ವಜ ಮತ್ತು ರಾಷ್ಟ್ರ ಧ್ವಜ ಜಗಳ ಹಚ್ಚಿದ್ದಾರೆ” ಎಂದು ಆರೋಪಿಸಿದರು.

“ಮೋದಿ ಮುಂದೆ ಕಾಂಗ್ರೆಸ್ ಬ್ಲ್ಯಾಕ್‌ಮೇಲ್ ರಾಜಕೀಯ ನಡೆಯೋದಿಲ್ಲ. ಹಾಲಿಂದ ಅಲ್ಕೋ ಹಾಲಿನ ದರ ಎರಿಕೆ ಮಾಡಿದ್ದಾರೆ. ಲಕ್ಷಣ ಸವದಿ ಸೇರಿದಂತೆ ದೇಶ ಮುಖ್ಯ ಎನ್ನುವವರು ಬಿಜೆಪಿಗೆ ಬರಬೇಕು. ಅಧಿಕಾರ ಆಸ್ತಿ ಅಲ್ಲದೇ ದೇಶ ಮುಖ್ಯ ಎನ್ನುವವರಿಗೆ ಬಿಜೆಪಿ ಬಾಗಿಲು ತೆರೆದಿದೆ” ಎಂದರು.

ಕುರುಬರು ಹಿಂದೂಗಳಲ್ಲವೇ?

“ಕುರುಬರ ಹಾಸ್ಟೆಲ್ ಮೇಲೆ ಯಾರು ದಾಳಿ ಮಾಡಿಲ್ಲ. ಹಾಸ್ಟೆಲ್ ಮುಂದೆ ಇರೋ ಕಾಂಗ್ರೆಸ್ ನಾಯಕರ ಫ್ಲಕ್ಸ್ ಹರಿದಿದ್ದಾರೆ. ಕಾಂಗ್ರೆಸ್ ಟೂಲ್ ಕಿಟ್ ರಾಜಕೀಯ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಕುರುಬರು ಹಿಂದೂಗಳಲ್ಲವೆ? ಅವರು ದೇಶ ಭಕ್ತರು. ಸಂಗೊಳ್ಳಿ ರಾಯಣ್ಣ ಯಾರು? ಕನಕದಾಸ ಸನಾತನ ಪರಂಪರೆಯ ಎತ್ತಿ ಹಿಡಿದಿದ್ದಾರೆ” ಎಂದು ತಿಳಿಸಿದರು.

ಮಾಗಡಿ ಶಾಸಕ ಬಾಲಕೃಷ್ಣ ವಿಚಾರವಾಗಿ ಮಾತನಾಡಿ, “2024 ರ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ಅನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸದಿದ್ದರೆ ತಮ್ಮ ಸರ್ಕಾರ ನೀಡಿರುವ ಪಂಚ ಗ್ಯಾರಂಟಿಗಳನ್ನು ಹಿಂಪಡೆಯಲಿದೇ ಎಂದು ಕಾಂಗ್ರೆಸ್ ಶಾಸಕ ಕನ್ನಡಿಗರಿಗೆ ಬೆದರಿಕೆ ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸುಳ್ಳುಗಾರ ಕಾಂಗ್ರೆಸ್‌ಗೆ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments