Homeಕರ್ನಾಟಕನಮ್ಮ ರಾಜ್ಯದ ಬಾಕಿ ಅನುದಾನ ವಿಚಾರವಾಗಿ ಸಿಹಿ ಸುದ್ದಿ ಬಂದಿದೆ: ಸಿಎಂ ಡಿ ಕೆ ಶಿವಕುಮಾರ್

ನಮ್ಮ ರಾಜ್ಯದ ಬಾಕಿ ಅನುದಾನ ವಿಚಾರವಾಗಿ ಸಿಹಿ ಸುದ್ದಿ ಬಂದಿದೆ: ಸಿಎಂ ಡಿ ಕೆ ಶಿವಕುಮಾರ್

“ನಮ್ಮ ರಾಜ್ಯದ ಹಳೆಯ ಬಾಕಿ ವಿಚಾರವಾಗಿ ನಾನು ವಿತ್ತ ಸಚಿವರೊಂದಿಗೆ ಚರ್ಚೆ ಮಾಡಿದ್ದು, ಕೆಲವು ಸಿಹಿ ಸುದ್ದಿ ಕೊಟ್ಟಿದ್ದಾರೆ. ನಾನು ಈಗ ಆ ಬಗ್ಗೆ ಹೇಳುವುದಿಲ್ಲ. ನಂತರ ಮಾತನಾಡುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಜಿಎಸ್ ಟಿ ಸಭೆ ಬಳಿಕ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಜಿಎಸ್ ಟಿ ಕೌನ್ಸಿಲ್ ಸಭೆ ಅತ್ಯುತ್ತಮವಾಗಿ ನಡೆಯಿತು. ಕರ್ನಾಟಕದ ಅಂಶಗಳನ್ನು ಎಲ್ಲರೂ ಒಪ್ಪಿದ್ದಾರೆ. ಜಿಎಸ್ ಟಿ ಪಾವತಿಸದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸುವ ವಿಚಾರ ಪ್ರಸ್ತಾಪವಾಯಿತು. ಆದಾಯ ತೆರಿಗೆ ನಿಯಮ, ನಿಬಂಧನೆಗಳಂತೆ ಮಾಡಬೇಕು, ಅನಗತ್ಯವಾಗಿ ಅಧಿಕಾರಿಗಳು ವ್ಯಾಪಾರಸ್ಥರನ್ನು ಬಂಧಿಸುವುದು ಸರಿಯಲ್ಲ. ಅವರಿಂದ ಎಷ್ಟು ಕಟ್ಟಿಸಿಕೊಳ್ಳಬೇಕೋ ಅಷ್ಟು ಹಣ ಕಟ್ಟಿಸಿಕೊಳ್ಳೋಣ. ಬಂಧಿಸುವುದು ಸರಿಯಲ್ಲ ಎಂದು ಚರ್ಚೆಯಾಯಿತು. ಒಂದು ರಾಜ್ಯ ಬಿಟ್ಟರೆ ಉಳಿದ ರಾಜ್ಯಗಳು ಒಪ್ಪಿವೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments