Homeಕರ್ನಾಟಕಯಡಿಯೂರಪ್ಪ ಮನೆಯ ಬೆಕ್ಕುಗಳಿಗೂ ಹುದ್ದೆ ಕೊಟ್ಟು ಬಿಡಿ: ಯತ್ನಾಳ ಗುಡುಗು

ಯಡಿಯೂರಪ್ಪ ಮನೆಯ ಬೆಕ್ಕುಗಳಿಗೂ ಹುದ್ದೆ ಕೊಟ್ಟು ಬಿಡಿ: ಯತ್ನಾಳ ಗುಡುಗು

ವಿಜಯಪುರ: ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಅವರು ಮಾಜಿ ಮತ್ತೆ ಕಿಡಿಕಾರಿದ್ದಾರೆ.

ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ಬಳಿಕ​ ಯತ್ನಾಳ್​ ಮತ್ತಷ್ಟು ಸಿಟ್ಟಾಗಿದ್ದು, ತಮ್ಮ ಮನೆಗೆ ವಿಜಯೇಂದ್ರ ಬರುವುದು ಬೇಡ ಎಂದು ಬಹಿರಂಗವಾಗಿಯೇ ಹೇಳಿದ್ದರು.

ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮೊದಲು ಮಾಜಿ ಮುಖ್ಯಮಂತ್ರಿ ಅಂತಿದ್ದರು. ಮುಖಭಂಗ ಆಗುತ್ತೆ ಅಂತಾ ಈಗ ನಿಕಟಪೂರ್ವ ಎಂದು ಹೇಳುತ್ತಾರೆ. ಅಪ್ಪ, ಮಗ ಸೇರಿ ನಾಟಕ ಮಾಡಬೇಡಿ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಬಿಜೆಪಿಯೊಳಗಿನ ಎಲ್ಲ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನೂ ಏನಾದರೂ ಉಳಿದಿದ್ದರೇ ಮನೆಯ ಬೆಕ್ಕುಗಳಿಗೆ ಕೊಟ್ಟು ಬಿಡಿ ಅಂತ ಹೇಳಿದ್ದೇನೆ. ಪ್ರಧಾನ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅಂತ ಮಾಡಿಕೊಳ್ಳಲಿ” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾಟಕ ಮಾಡೋದು, ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಯಾಕಂದ್ರೆ ಆ ಖುರ್ಚಿ ಬಿಡಬಾರದು‌ ಅಂತ. ರೈತರ ಬಗ್ಗೆ ಕಣ್ಣೀರು ಹಾಕೋದು ಎಲ್ಲ ನಾಟಕ” ಎಂದು ಹರಿಹಾಯ್ದರು.

ವಿಜಯಪುರದ ಆನಂದ ನಗರದಲ್ಲಿ ನಡೆದ ದಾನಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹರಿಹಾಯ್ದ ಅವರು, “ನನ್ನನ್ನು ಹೆದರಿಸಬೇಕು ಅಂತಾ ಬ್ಲ್ಯಾಕ್​ಮೇಲ್ ಮಾಡುತ್ತಾರೆ. ನನಗೆ ಬ್ಲ್ಯಾಕ್​ಮೇಲ್​ ಮಾಡಲು ಬಂದರೂ ನಿಮ್ಮದು ನನ್ನ ಬಳಿ ಇದೆ” ಎಂದರು.

“ಈಗ ಡಿ ಕೆ ಶಿವಕುಮಾರ್​ ಅವರದ್ದು ತೆಗೆದಿದ್ದೇನೆ. ರಾಜ್ಯವನ್ನು ಲೂಟಿ ಮಾಡಿ 10 ರಿಂದ 20ಸಾವಿರ ಕೋಟಿ ರೂ. ಲೂಟಿ ಮಾಡಿದ್ದರೂ ಇನ್ನೂ ಸಮಾಧಾನ ಇಲ್ಲ. ಡಿ.ಕೆ.ಶಿವಕುಮಾರ್​ ವಿರುದ್ಧ ಮತ್ತೊಂದು ಕೇಸ್​ ದಾಖಲಿಸುತ್ತಿದ್ದೇವೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments