Homeಕರ್ನಾಟಕಎಸ್ಐಟಿ ಹೆಸರಲ್ಲಿ ಪ್ರಕರಣ ಮುಚ್ಚಿಹಾಕುವ ಹುನ್ನಾರ ಫಲಿಸುವುದಿಲ್ಲ: ಆರ್‌ ಅಶೋಕ್‌

ಎಸ್ಐಟಿ ಹೆಸರಲ್ಲಿ ಪ್ರಕರಣ ಮುಚ್ಚಿಹಾಕುವ ಹುನ್ನಾರ ಫಲಿಸುವುದಿಲ್ಲ: ಆರ್‌ ಅಶೋಕ್‌

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ದಿನಕ್ಕೊಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಇದ್ದು, ಇಡಿ ದಾಳಿ, ಮಾಜಿ ಸಚಿವ ಬಿ.ನಾಗೇಂದ್ರ ಹಾಗು ನಿಗಮದ ಮಾಜಿ ಅಧ್ಯಕ್ಷ ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆಗೆ ಗೈರಾಗಿರುವುದು ಮತ್ತಷ್ಟು ಅನುಮಾನಗಳಿಗೆ ಇದೆ ಮಾಡಿಕೊಟ್ಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಆರೋಪಿಸಿದ್ದಾರೆ.

ಎಕ್ಸ್‌ ತಾಣದಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ, ಆರೋಪಿಗಳು ಎಸ್ಐಟಿ ವಿಚಾರಣೆಗೆ ಗೈರಾಗುತ್ತಿರುವುದು ಯಾಕೆ? ವಿಚಾರಣೆಗೆ ಹಾಜರಾದರೆ ನಿಮ್ಮ ಹೆಸರು ಬಾಯಿ ಬಿಡುತ್ತಾರೆ ಎನ್ನುವ ಭಯವೇ” ಎಂದು ಪ್ರಶ್ನಿಸಿದರು.

“ಎಸ್ಐಟಿ ಹೆಸರಿನಲ್ಲಿ ಈ ಪ್ರಕರಣವನ್ನ ಮುಚ್ಚಿಹಾಕುವ ನಿಮ್ಮ ಹುನ್ನಾರ ಫಲಿಸುವುದಿಲ್ಲ. ಸತ್ಯ ಹೊರಬರುವರೆಗೂ, ದಲಿತರ ದುಡ್ಡು ತಿಂದ ತಿಮಿಂಗಿಲಗಳಿಗೆ ಶಿಕ್ಷೆ ಆಗುವವರೆಗೂ ನಾವು ಸುಮ್ಮನಿರುವುದಿಲ್ಲ” ಎಂದಿದ್ದಾರೆ.

“₹4,000 ಕೋಟಿ ಮೌಲ್ಯದ ಮುಡಾ ಭೂಹಗರಣ ತಮ್ಮ ಕುತ್ತಿಗೆಗೆ ಬರುತ್ತಿದ್ದಂತೆ ಗಲಿಬಿಲಿಗೊಂಡಿರುವ ಸಿಎಂ ಸಿದ್ದರಾಮಯ್ಯ ನವರು ಹೇಗಾದರೂ ಮಾಡಿ ಸಾಕ್ಷಿ ನಾಶ ಮಾಡಬೇಕು ಎಂಬ ಸಂಚು ಹೂಡಿ ಕಡತಗಳನ್ನ ನಾಶ ಮಾಡಲು ಹೊರಟಿದ್ದಾರೆ” ಎಂದು ದೂರಿದ್ದಾರೆ.

“ಸಿಎಂ ಸಿದ್ದರಾಮಯ್ಯನವರೇ, ತಮ್ಮ ಡೋಂಗಿ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ತಮ್ಮ ಭ್ರಷ್ಟಾಚಾರದ ಕರ್ಮಕಾಂಡ ಬಟಾ ಬಯಲಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಕಡತಗಳನ್ನ ನಾಶ ಮಾಡಬಹುದು, ಆದರೆ ಸತ್ಯವನ್ನ ಎಂದಿಗೂ ನಾಶ ಮಾಡಲು ಆಗುವುದಿಲ್ಲ. ನೆನಪಿಡಿ” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments