Homeದೇಶವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ ರೂ.14.50 ಇಳಿಕೆ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ ರೂ.14.50 ಇಳಿಕೆ

ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್​ ಬೆಲೆ ಇಳಿಕೆ ಆಗಿದೆ.

ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸುಮಾರು 14.5 ರೂಪಾಯಿಯಿಂದ 17 ರೂಪಾಯಿವರೆಗೆ ಇಳಿಸಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಿಮಾನ ಇಂಧನ (ಎಟಿಎಫ್) ಮತ್ತು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡ‌ರ್ ದರವನ್ನು ಇಳಿಕೆ ಮಾಡಿವೆ. ಹೊಸ ದರವು ಗುರುವಾರದಿಂದಲೇ ಜಾರಿಗೆ ಬಂದಿದೆ.

ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ತೂಕದ ಸಿಲಿಂಡರ್ ದರ ₹14.50 ಕಡಿಮೆ ಆಗಿದೆ. ಪ್ರಸ್ತುತ ದರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್​ ಬೆಲೆ ಚೆನ್ನೈನಲ್ಲಿ 1,900 ರೂಪಾಯಿ ಆಗಿದ್ದರೆ ಮುಂಬೈನಲ್ಲಿ 1700 ರೂಪಾಯಿ ಆಗಿದೆ. ದೆಹಲಿಯಲ್ಲಿ 1,747 ರೂಪಾಯಿ ಆಗಿದೆ. ಹಾಗೆ ಕೋಲ್ಕತ್ತದಲ್ಲಿ 1,851 ರೂಪಾಯಿ ಆಗಿದೆ. ಬೆಂಗಳೂರಲ್ಲಿ 1,769 ರೂಪಾಯಿ ಇದೆ.

ಹಾಗೆಯೇ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರವು ಕಳೆದ ತಿಂಗಳು ₹50 ಹೆಚ್ಚಳವಾಗಿದ್ದು, ₹853 ಆಗಿದೆ. ನ್ನು ಉಜ್ವಲ್ ಸ್ಕೀಮ್ ಅಡಿಯಲ್ಲಿ ಬರುವ ಸಿಲಿಂಡರ್ ಬೆಲೆ 503 ರಿಂದ 553 ರೂಪಾಯಿಗೆ ಏರಿಕೆ ಆಗಿತ್ತು. ಈ ಬಾರಿ ಗೃಹಬಳಕೆಯ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments