Homeಕರ್ನಾಟಕಸಂಜೆ ವೇಳೆ ಕಸ ಸಂಗ್ರಹಣೆಗೆ ಪ್ರಾಯೋಗಿಕ ಚಾಲನೆ: ಆಯುಕ್ತ ಕೆ. ಎನ್. ರಮೇಶ್

ಸಂಜೆ ವೇಳೆ ಕಸ ಸಂಗ್ರಹಣೆಗೆ ಪ್ರಾಯೋಗಿಕ ಚಾಲನೆ: ಆಯುಕ್ತ ಕೆ. ಎನ್. ರಮೇಶ್

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗೂ ರಸ್ತೆಬದಿಯ ಕಸದ ಬ್ಲಾಕ್‌ಸ್ಪಾಟ್‌ಗಳನ್ನು ನಿಯಂತ್ರಿಸಲು ಸಂಜೆ ವೇಳೆಯ ಕಸ ಸಂಗ್ರಹಣೆಯನ್ನು ಪ್ರಾಯೋಗಿಕವಾಗಿ ನಡೆಸುತ್ತಿರುವುದನ್ನು ಆಯುಕ್ತರಾದ ಶ್ರೀ ಕೆ. ಎನ್.ರಮೇಶ್ ರವರು ಖುದ್ದು ಪರಿಶೀಲನೆ ನಡೆಸಿದರು.

ಸಂಜೆ 5 ರಿಂದ ರಾತ್ರಿ 12 ರವರೆಗೆ ಕಸ ಸಂಗ್ರಹಣೆ

ಮುಂಜಾನೆ ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗೃಹಿಣಿಯರಿಗೆ ಬೆಳಗ್ಗೆ ಕಸ ನೀಡಲು ಸಮಯ ಹೊಂದಾಣಿಕೆಯಾಗದ ಕಾರಣ, ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಕಸದ ಬ್ಲಾಕ್‌ಸ್ಪಾಟ್‌ಗಳನ್ನು ನಿಯಂತ್ರಿಸಲು ಸಂಜೆ 5 ರಿಂದ ರಾತ್ರಿ 12 ಗಂಟೆಯವರೆಗೆ ಹಸಿ ಮತ್ತು ಒಣ ಕಸ ಸಂಗ್ರಹಣೆ ವಾಹನಗಳು ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಪಾಲಿಕೆಯ ಕಾರ್ಯಕ್ಕೆ ನಾಗರೀಕರ ಪ್ರಶಂಸೆ

ರಾತ್ರಿ ವೇಳೆಯೂ ಸಹ ಕಸ ಸಂಗ್ರಹಣೆ ಕಾರ್ಯವನ್ನು ಪಾಲಿಕೆ ಕೈಗೊಂಡಿರುವುದಕ್ಕಾಗಿ ಸ್ಥಳೀಯರು ನಾನಾ ಕಾರಣಗಳಿಂದ ಬೆಳಗಿನ ವೇಳೆ ಕಸದ ಆಟೋಗಳಿಗೆ ಕಸ ನೀಡಲು ಆಗದವರಿಗೆ ಹಾಗೂ ಸಮಯ ಹೊಂದಾಣಿಕೆ ಆಗದವರಿಗೆ ಅನುಕೂಲಕರವಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

5 ವಾರ್ಡ್‌ಗಳಲ್ಲಿ ಪ್ರಾಯೋಗಿಕ ಜಾರಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ವಾರ್ಡ್‌ಗಳು ಹಾಗೂ ಹೊಂಗಸಂದ್ರ ವಾರ್ಡ್ ಸೇರಿದಂತೆ ಒಟ್ಟು 5 ವಾರ್ಡ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ 5 ವಾರ್ಡ್‌ಗಳಲ್ಲಿ ಬೆಳಗ್ಗೆ ಒಟ್ಟು 160 ಕಸ ಸಂಗ್ರಹಿಸುವ ವಾಹನಗಳು ಸಂಚರಿಸುತ್ತಿದ್ದು, ಸಂಜೆ ವೇಳೆ 20 ರಿಂದ 25 ಆಟೋಗಳ ಮೂಲಕ ಯಶಸ್ವಿಯಾಗಿ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ ಬೆಳಗ್ಗೆ 31 ಆಟೋಗಳು ಓಡಾಡಿದರೆ, ಸಂಜೆ 6 ವಾಹನಗಳು (3 ಹಸಿ ಕಸ ಹಾಗೂ 3 ಒಣ ಕಸ) ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಯುಕ್ತರು ಹೇಳಿದರು.

ಹೆಚ್‌ಎಸ್‌ಆರ್ ಲೇಔಟ್‌ನ ಮೇಲ್ಸೇತುವೆ ಕೆಳಭಾಗದಲ್ಲಿ ಪಾರ್ಕಿಂಗ್ ಪರಿಶೀಲನೆ

ಹೆಚ್‌ಎಸ್‌ಆರ್ ಲೇಔಟ್‌ನ ಅಗರ ಕೆರೆ ಸುತ್ತಮುತ್ತ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ಅದಕ್ಕಾಗಿ ನಿರುಪಯುಕ್ತವಾಗಿರುವ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್ ಮುಂಭಾಗದ ಫ್ಲೈ ಓವರ್ ಕೆಳಭಾಗದ ಜಾಗವನ್ನು ವಾಹನಗಳ ಪಾರ್ಕಿಂಗ್ ಗಾಗಿ ಸುವ್ಯವಸ್ಥಿತ ಪ್ರದೇಶವನ್ನಾಗಿ ರೂಪಿಸಲು ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸಿ, ಸಲ್ಲಿಸುವಂತೆ ಆಯುಕ್ತರು ಅಧಿಕಾರಿಗಳಿಗೆ  ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments