Homeಕರ್ನಾಟಕಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಭಾಷಣ ಮಾತನಾಡಿದ ಜಾಗ ಶುದ್ದೀಕರಣ ಖಂಡನೀಯ: ರಮೇಶ್ ಬಾಬು 

ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕ ಭಾಷಣ ಮಾತನಾಡಿದ ಜಾಗ ಶುದ್ದೀಕರಣ ಖಂಡನೀಯ: ರಮೇಶ್ ಬಾಬು 

ಹಲದ್ವಾನಿ (ಉತ್ತರಾಖಂಡ)ಯಲ್ಲಿ ನಡೆದ ಘಟನೆ ಬಿಜೆಪಿ–ಆರ್‌ಎಸ್‌ಎಸ್‌ ಸಿದ್ಧಾಂತದ ಹಿಂದುಳಿದ ಹಾಗೂ ದಲಿತರ ವಿಭಜಕ ಮನೋಭಾವವನ್ನು ಬಹಿರಂಗಪಡಿಸಿದೆ ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆಸಲಾದ “ಶುದ್ಧೀಕರಣ” ಕಾರ್ಯವು ಅತ್ಯಂತ ಕಳವಳಕಾರಿ ಹಾಗೂ ಖಂಡನೀಯವಾಗಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿ ಖಂಡಿಸಿದ್ದಾರೆ.

ಈ ಘಟನೆ ಖರ್ಗೆ ಅವರ ವಿರುದ್ಧ ಬಿಜೆಪಿ ಮತ್ತು ಸಂಘ ಪರಿವಾರ ಅನುಸರಿಸುತ್ತಿರುವ ಪ್ರತೀಕಾರ ಮತ್ತು ದ್ವೇಷದ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಆಗಸ್ಟ್ 8 ರಂದು ಹಲದ್ವಾನಿಯಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆಸಲಾಗಿತ್ತು. ನಂತರ ಅದೇ ಸ್ಥಳದಲ್ಲಿ ಬಿಜೆಪಿ/ಸಂಘ ಪರಿವಾರದ ಒಂದು ಸಂಘಟನೆಯಿಂದ “ಶುದ್ಧೀಕರಣ” ಹವನ ನಡೆಸಲಾಗಿದೆ. ಈ ವಿಷಯವನ್ನು ಖರ್ಗೆ ಅವರೇ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ, ಇಂತಹ ಕೃತ್ಯದ ಅತ್ಯಂತ ಆಕ್ಷೇಪಾರ್ಹ ಹಾಗೂ ಅವಮಾನಕಾರಿ ಎಂದು ಎತ್ತಿ ತೋರಿಸಿದ್ದಾರೆ. ಇದೀಗ ಬಿಜೆಪಿ ನಾಯಕರೂ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಹೇಳಿದ್ದಾರೆ ಎಂದು ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷರು ಹಾಗೂ ದೇಶದ ಅತ್ಯಂತ ಹಿರಿಯ ನಾಯಕರು ಮತ್ತು ಸಂಸದೀಯ ಪಟು. ಮುಖ್ಯವಾಗಿ ಅವರು ಐತಿಹಾಸಿಕವಾಗಿ ಶೋಷಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ಹಲವು ದಶಕಗಳಿಂದ ಹೋರಾಡುತ್ತಿದ್ದಾರೆ. ಖರ್ಗೆ ಅವರು ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರಣಕ್ಕಾಗಿ ಆ ಸ್ಥಳದಲ್ಲಿ “ಶುದ್ಧೀಕರಣ” ಆಚರಣೆಯನ್ನು ನಡೆಸಲಾಗಿದೆ. ಅದು ಸಾಮಾಜಿಕ ಬಹಿಷ್ಕಾರ ಮತ್ತು ಜಾತಿ ಪೂರ್ವಾಗ್ರಹದ ಅತ್ಯಂತ ಆತಂಕಕಾರಿ ಸಂದೇಶವನ್ನು ನೀಡುತ್ತದೆ. ಆಧುನಿಕ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಯಾರನ್ನೂ ಅವರ ಜಾತಿ, ಜನ್ಮ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ “ಅಶುದ್ಧ” ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಹಿಂದೂ ಧರ್ಮ ಮತ್ತು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಜಾತಿ ತಾರತಮ್ಯ ಅಥವಾ ಅಸ್ಪೃಶ್ಯತೆಯೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ದೃಢ ನಿಲುವಾಗಿದೆ. ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ರದ್ದುಪಡಿಸಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ಖಾತರಿಪಡಿಸಿದೆ. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು ಹಾಗೂ ಅಸಂಖ್ಯಾತ ಸಾಮಾಜಿಕ ಸುಧಾರಕರ ಮೌಲ್ಯಗಳು ಇಂತಹ ತಾರತಮ್ಯಗಳ ವಿರುದ್ಧ ದೃಢವಾಗಿ ನಿಂತಿವೆ ಎಂದು ಹೇಳಿದ್ದಾರೆ.

ಈ ಘಟನೆಯ ಕುರಿತು ಬಿಜೆಪಿ ಮತ್ತು ಸಂಘ ಪರಿವಾರ ಉತ್ತರದಾಯಿಗಳಾಗಬೇಕು. ಕೇವಲ ಆರೋಪಗಳನ್ನು ನಿರಾಕರಿಸುವ ಮೂಲಕ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಂಘ ಪರಿವಾರದ ಒಂದು ಸಂಘಟನೆಯಿಂದ ಹಲ್ದ್ವಾನಿಯಲ್ಲಿ ಈ “ಶುದ್ಧೀಕರಣ” ಕಾರ್ಯಕ್ರಮ ನಡೆಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಕಾನೂನು ಉಲ್ಲಂಘನೆ ಮಾಡಿದ್ದರೆ, ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಂಡು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಸಮಾನತೆ, ಭ್ರಾತೃತ್ವ ಮತ್ತು ಸಂವಿಧಾನಾತ್ಮಕ ನಾಗರಿಕತ್ವದ ಪರವಾಗಿ ನಿಂತಿದೆ. ಖರ್ಗೆ ಅವರನ್ನು ಅಥವಾ ಯಾವುದೇ ನಾಗರಿಕರನ್ನು ಜಾತಿಯ ಆಧಾರದ ಮೇಲೆ ಅವಮಾನಿಸುವ ಯಾವುದೇ ಪ್ರಯತ್ನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಲ್ದ್ವಾನಿಯಲ್ಲಿ ಶ್ರೀ ಖರ್ಗೆ ಅವರ ಕಾರ್ಯಕ್ರಮದ ನಂತರ “ಶುದ್ಧೀಕರಣ” ನಡೆಸಿದ ಸಂಘಟನೆಯ ವಿರುದ್ಧ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಆ ಸಂಘಟನೆಯ ವಿರುದ್ಧ ನಿಷೇಧ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಜಾತಿ ಆಧಾರಿತ ತಾರತಮ್ಯ, ಅಸ್ಪೃಶ್ಯತೆ ಮತ್ತು ದಲಿತರ ಶೋಷಣೆಗೆ ಸಂವಿಧಾನ ರೂಪಿತವಾದ ಭಾರತದಲ್ಲಿ ಯಾವುದೇ ಸ್ಥಾನವಿಲ್ಲ ಎಂಬುದನ್ನು ಬಿಜೆಪಿ ನಾಯಕತ್ವವು ಸ್ಪಷ್ಟ ಪಡಿಸಬೇಕು. ಹಲದ್ವಾನಿ ಘಟನೆ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂಬುದನ್ನು ತಿಳಿಸುತ್ತದೆ. ದೇಶದಲ್ಲಿ ಇಂತಹ ಮನೋಭಾವಗಳನ್ನು ಬಲಪಂಥೀಯ ಸಂಘಟನೆಗಳು ಉತ್ತೇಜಿಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಕಾಂಗ್ರೆಸ್ ಪಕ್ಷವು ಜಾತಿ, ಧರ್ಮ, ಭಾಷೆ ಅಥವಾ ಸಾಮಾಜಿಕ ಹಿನ್ನೆಲೆಯ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕರೂ ಗೌರವ ಮತ್ತು ಸಮಾನತೆಯಿಂದ ಬದುಕುವ ಭಾರತಕ್ಕಾಗಿ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರಿಸಲಿದೆ ಮತ್ತು ಹಲದ್ವಾನಿ ಘಟನೆಯನ್ನು ಖಂಡಿಸುತ್ತದೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments