Homeಕರ್ನಾಟಕಬಜೆಟ್‌ ಅಧಿವೇಶನ | ಕೊಬ್ಬರಿ ಕುರಿತ ಚರ್ಚೆ; ಜೆಡಿಎಸ್-ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ

ಬಜೆಟ್‌ ಅಧಿವೇಶನ | ಕೊಬ್ಬರಿ ಕುರಿತ ಚರ್ಚೆ; ಜೆಡಿಎಸ್-ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ

ವಿಧಾನಸಭೆಯ ಎರಡನೇ ದಿನದ ಕಲಾಪದಲ್ಲಿ ಕೊಬ್ಬರಿ ಬೆಲೆ ಕುಸಿತ ಮತ್ತು ಖರೀದಿ ಕೇಂದ್ರ ಸ್ಥಗಿತ ವಿಷಯವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಾಕ್ಸಮರ ನಡೆಯಿತು.

ಕಲಾಪದಲ್ಲಿ ಕೊಬ್ಬರಿ ಬೆಲೆ ಕುಸಿತ ಹಾಗೂ ಖರೀದಿ ಕೇಂದ್ರ ಸ್ಥಗಿತವಾಗಿರುವ ಕುರಿತು ಚರ್ಚಿಸಲು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರು ನಿಲುವಳಿ ಸೂಚನೆ ನೀಡಿದರು.

ಈ ವೇಳೆ ಮಾತಾಡಿದ ಕಾಂಗ್ರೆಸ್‌ ಶಾಸಕ ಶಿವಲಿಂಗೇಗೌಡ, “ಕೊಬ್ಬರಿ ಖರೀದಿ ಮಾಡಲು ಡಿ ಕೆ ಶಿವಕುಮಾರ್‌ಗೆ ಅಧಿಕಾರವಿಲ್ಲ, ಖರೀದಿ ಮಾಡುವ ಅಧಿಕಾರ ಇರೋದು ಪ್ರಧಾನಿ ಮೋದಿಗೆ ಮಾತ್ರ” ಎಂದರು.

ಶಿವಲಿಂಗೇಗೌಡ ಈ ಹೇಳಿಕೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ ,ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆ ಬಗ್ಗೆ ಮಾತಾಡುವಾಗ ರಾಜಕೀಯ ಬೇಡ ಎಂದು ಶಾಸಕ ಸುರೇಶ್ ಗೌಡ ಮನವಿ ಮಾಡಿದರು.

“ಯಾರ ಮನೆಯಿಂದಲೂ ರೈತರಿಗೆ ಹಣ ಕೊಡೋದಿಲ್ಲ, ಯಾವುದೇ ಸರಕಾರ ಕೊಟ್ಟರೂ ಸರಕಾರದಿಂದಲೇ ಹಣ ಕೊಡಬೇಕು. ರೈತರ ಪರವಾಗಿ ಇಲ್ಲಿ ಮಾತಾಡಿ” ಎಂದು ಶಾಸಕ ಸುರೇಶ್ ಗೌಡ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments