Homeಕರ್ನಾಟಕಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ, ಆತಂಕದಲ್ಲಿ ಪೋಷಕರು

ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ, ಆತಂಕದಲ್ಲಿ ಪೋಷಕರು

ರಾಜಧಾನಿ ಬೆಂಗಳೂರಿನ 15 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಮನೆಗೆ ಕಳಿಸಲಾಗಿದೆ. ಪೋಷಕರೂ ಆತಂಕಗೊಂಡು ಶಾಲೆ ಬಳಿಗೆ ಓಡೋಡಿ ಬರುತ್ತಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಭೇಟಿ

ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೇ ಡಿಸಿಎಂ ಡಿಕೆ ಶಿವಕುಮಾರ್ ಸದಾಶಿವನಗರದ ನ್ಯೂ ಅಕಾಡೆಮಿ ಶಾಲೆಗೆ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದು ಧೈರ್ಯ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರ ಜೊತೆಯೂ ಮಾತನಾಡಿದ್ದೇನೆ. ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.

ಹುಸಿ ಬಾಂಬ್ ಕರೆ?

ಇನ್ನು ಇದೇ ವೇಳೆ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, “ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಇ-ಮೇಲ್ ಬಂದಿರುವ ಶಾಲೆಗಳಿಗೆ ಪೊಲೀಸರು ತೆರಳಿ ಪರಿಶೀಲಿಸುತ್ತಿದ್ದಾರೆ‌, ಯಾವುದೇ ಕಾರಣಕ್ಕೆ ಆತಂಕ ಪಡುವ ಸ್ಥಿತಿ ಇಲ್ಲ” ಎಂದು ಭರವಸೆ ನೀಡಿದ್ದಾರೆ.

ಸಮಾಜಘಾತುಕರ ಹೆಡೆಮುರಿ ಕಟ್ಟುತ್ತೇವೆ: ಪರಮೇಶ್ವರ್‌

“15 ಶಾಲೆಗಳನ್ನು ಪರಿಶೀಲಿಸಲಾಗುತ್ತಿದೆ. ಕಳೆದ ವರ್ಷವೂ ಈ ರೀತಿ ಬೆದರಿಕೆ ಮೈಲ್ ಬಂದಿತ್ತು. ಆದರೂ ಈ ಬಾರಿ ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ. ಎಲ್ಲಾ ರೀತಿಯಲ್ಲೂ ಪರಿಶೀಲಿಸುತ್ತಿದ್ದೇವೆ. ಸಮಾಜಘಾತುಕರ ಹೆಡೆಮುರಿ ಕಟ್ಟುತ್ತೇವೆ, ಅವರನ್ನು ಬಿಡಲು ಸಾಧ್ಯವೇ ಇಲ್ಲ” ಎಂದರು.

ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಮಾತನಾಡಿ, “ವಿದ್ಯಾಶಿಲ್ಪ ಶಾಲೆಗೆ ಮೇಲ್ ಬಂದಿದೆ, ಉಳಿದಂತೆ ಎಲ್ಲಾ ಶಾಲೆಗೂ ಬೆದರಿಕೆ ಮೇಲೆ ಫಾರ್ವರ್ಡ್ ಆಗಿದೆ. ಯಾರು ಗಾಬರಿ ಬೀಳುವ ಅಗತ್ಯವಿಲ್ಲ. ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ” ಎಂದಿದ್ದಾರೆ.

ಆರ್ ಅಶೋಕ್ ಪ್ರತಿಕ್ರಿಯೆ

“ಬೆದರಿಕೆ ಬಗ್ಗೆ ಪೊಲೀಸ್ ಕಮೀಷನರ್ ಜೊತೆ ಮಾತನಾಡಿದ್ದೆ. ಪತ್ರ ಟೈಪ್ ಮಾಡಿದ್ದು, ನೋಡಿದ್ರೆ ಹೈ ಲೆವೆಲ್ ಟೆರರಿಸ್ಟ್ ತರ ಕಾಣುತ್ತೆ. ಅಲ್ಲಾಹುಗೆ ತೊಂದರೆ ಮಾಡ್ತಿದೀರಿ ಎಂದಿದೆ. ಮುಂಬೈನಲ್ಲಿ ಗಲಾಟೆ ಮಾಡಿದ್ರಿ ಎಂಬ ಘಟನೆಯೂ ಉಲ್ಲೇಖ ಆಗಿದೆ. ಹೀಗೆಲ್ಲಾ ಮೆಸೇಜ್ ಮಾಡಿದಾರೆ. ಇವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಬಾಂಬ್ ಸ್ಕ್ವಾಡ್ ,ಡಾಗ್ ಸ್ಕ್ವಾಡ್ ಬಂದಿದೆ, ಇಲ್ಲಿವರೆಗೇ ಏನೂ ಸಿಕ್ಕಿಲ್ಲ. ಸದ್ಯ ಹದಿನೈದು ಶಾಲೆಗೆ ಮೇಲ್ ಬಂದಿದೆ. ಜನರಲ್ಲಿ ಆತಂಕ ಶುರುವಾಗಿದ. ಹೀಗಾಗಿ ನಾನು ಕೂಡ ಭೇಟಿ ಮಾಡಿದ್ದೆನೆ” ಎಂದು ತಿಳಿಸಿದರು.

ಬೆದರಿಕೆ ಇ-ಮೇಲ್

ನೀವು ಇಸ್ಲಾಂ ಮತಕ್ಕೆ ಸೇರಬೇಕು, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಮೇಲ್ ನಲ್ಲಿ ಬರೆದಿರುವ ಆಗಂತುಕರು,ನೀವೆಲ್ಲ ಅಲ್ಲಾಹುವಿನ ವಿರೋಧಿಗಳು, ಸಾಯಲು ಸಿದ್ಧರಾಗಿರಿ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments