ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಎರಡು ವರ್ಷಗಳ ಅವಧಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ವಿವರಗಳನ್ನೊಳಗೊಂಡ ಸಮಿತಿಯನ್ನು ಪುನರ್ ರಚಿಸಿ ಸರ್ಕಾರ ಆದೇಶಿಸಿದೆ.
ಮುಂದಿನ ಸಮಿತಿ ಅಸ್ತಿತ್ವಕ್ಕೆ ಅಥವಾ ಎರಡು ವರ್ಷ ಅವಧಿಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿಯನ್ನು ಪುನರ್ ರಚಿಸಲಾಗಿದೆ. ಅಧ್ಯಕ್ಷರಾಗಿ ಪ್ರೊ.ರಾಜಪ್ಪ ದಳವಾಯಿ ಮತ್ತು ಸದಸ್ಯರಾಗಿ ಶೌಕತ್ ಅಜೀಂ, ಡಾ. ವಿನಾಯಕ ಕಮತದ, ಸಿ ಮರಿಸ್ವಾಮಿ. ಡಿ ಎನ್ ಗುರುಪ್ರಸಾದ್ ಸೇರಿದಂತೆ 14 ಸದಸ್ಯರು ಆಯ್ಕೆಯಾಗಿದ್ದಾರೆ.
ಪುನರ್ ರಚನೆಗೊಂಡ ಸಮಿತಿ ಆದೇಶ






