– ಅಲ್ಪಸಂಖ್ಯಾತರ ಓಲೈಕೆಯೇ ಸರ್ಕಾರದ ಕೆಲಸ: ಆರ್.ಅಶೋಕ್ ಆರೋಪ
– ಬಿಡದಿ ಟೌನ್ ಶಿಪ್ ಅನ್ನು ರೈತರ ಸಮಾಧಿ ಮೇಲೆ ಮಾಡಲು ಸರ್ಕಾರ ಹೊರಟಿದೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲೇ ಸದಾ ತೊಡಗಿದೆ. ಅದಕ್ಕೆಂದೇ ಹಿಜಾಬ್ ಮರು ಜಾರಿ ಮಾಡಿದರು. ಆಳಂದ ಗಲಭೆಯ ಪ್ರಕರಣ ವಾಪಸ್ ಪಡೆದರು ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಸರ್ಫ್ ಹಾಕಿ, ಡೆಟ್ಟಾಲ್ ಹಾಕಿ ತೊಳೆದರೂ ಈ ಸರ್ಕಾರದ ದುಷ್ಟ ಬುದ್ಧಿ ಹೋಗಲ್ಲ. ಪೆÇಲೀಸರ ಮೇಲೆ ಹಲ್ಲೆ ಮಾಡಿದವರ ಮೇಲಿನ, ಕೇಂದ್ರ ಸಚಿವರ ಕಾರು ಒಡೆದವರ ಮೇಲಿನ ಪ್ರಕರಣ ಕೈ ಬಿಟ್ಟಿದ್ದಾರೆ. ಕೋಮುಗಲಭೆ ಹಬ್ಬುವವರ ಮೇಲಿನ ಕೇಸ್ ವಾಪಸ್ ಪಡೆದಿರುವುದು ಸರಿಯಲ್ಲ ಎಂದರು.
ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಕರ್ತವ್ಯ. ಆದರೆ ಸಿದ್ದರಾಮಯ್ಯ ಅವರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ದೇಶದ ಭದ್ರತೆಗೆ ಅಪಾಯ ಆಗುವ ಇಂತಹ ನಿರ್ಧಾರಗಳನ್ನು ಬಿಜೆಪಿ ವಿರೋಧಿಸಿದೆ. ಸರ್ಕಾರ ಕೂಡಲೇ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಹಿಜಾಬ್ ಮರು ಜಾರಿ ಸಹ ಮುಸ್ಲಿಮರ ಓಲೈಕೆ ಕೆಲಸ. ರೈತರು ಮತ್ತು ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ಪಡೆಯಲಿ. ಕೋಮುಗಲಭೆಗೆ ಪ್ರಚೋಚನೆ ಮಾಡಿದವರ ಮೇಲಿನ ಪ್ರಕರಣ ಕೈಬಿಟ್ಟು ಬಹುಸಂಖ್ಯಾತರಿಗೆ ಸರ್ಕಾರ ದ್ರೋಹ ಮಾಡಿದೆ ಎಂದು ಹೇಳಿದರು.
ಮತ್ತೊಂದು ಸ್ಟೇಡಿಯಂ ಯಾವ ಪುರುಷಾರ್ಥಕ್ಕೆ
ಆನೇಕಲ್ ಸಮೀಪ ರೈತರ, ಪರಿಸರವಾದಿಗಳ ವಿರೋಧದ ನಡುವೆ ಸ್ಟೇಡಿಯಂ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈಗ ಇರುವ ಕ್ರಿಕೆಟ್ ಸ್ಟೇಡಿಯಂ ವರ್ಷದಲ್ಲಿ ನಾಲ್ಕು ಬಾರಿ ಮಾತ್ರ ಓಪನ್ ಆಗುತ್ತದೆ. ಮತ್ತೊಂದು ಸ್ಟೇಡಿಯಂ ಯಾವ ಪರುಷಾರ್ಥಕ್ಕೆ ಎಂದು ಪ್ರಶ್ನಿಸಿದರು. ನಿರ್ಮಿಸಲು ಮುಂದಾಗಿರುವ ಸ್ಟೇಡಿಯಂ ಸುತ್ತಲಿನ ಜಮೀನಿನ ಲೆಕ್ಕಕೊಡಲಿ. ಸ್ಟೇಡಿಯಂ ಮಾಡಿ ಅಂತ ಯಾರೂ ಕೇಳಿರಲಿಲ್ಲ. ಹೌಸಿಂಗ್ ಬೋರ್ಡ್ ಮನೆ ಇಲ್ಲದವರಿಗೆ ಮನೆ ಕಟ್ಟಬೇಕೇ ಹೊರತು ಸ್ಟೇಡಿಯಂ ಮಾಡಬಾರದು ಎಂದು ಆಕ್ಷೇಪಿಸಿದರು.
ರೈತರ ಸಮಾಧಿ ಮೇಲೆ ಟೌನ್ ಶಿಪ್…
ಬಿಡದಿ ಟೌನ್ಶಿಪ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಅವರು, ಬಿಡದಿ ಟೌನ್ ಶಿಪ್ ಅನ್ನು ರೈತರ ಸಮಾಧಿ ಮೇಲೆ ಮಾಡಲು ಸರ್ಕಾರ ಹೊರಟಿದೆ. ಇಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಸಾವಿರಾರು ಕೋಟಿ ಲಾಭವಾಗಲಿದೆ. ಈ ಟೌನ್ಶಿಪ್ ಅನ್ನು ಬಿಜೆಪಿ ಕೈ ಬಿಟ್ಟಿತ್ತು. ಈಗ ಮತ್ತೆ ಮಾಡಲು ಹೊರಟಿದ್ದಾರೆ. ರೈತರ ಶಾಪ ತಟ್ಟಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಡಿಫಾಸಿಟ್ ಕಳೆದುಕೊಳ್ಳಲಿದೆ. ರೈತರೇ ಬೆಂಬಲ ನೀಡುತ್ತಿದ್ದಾರೆ ಎಂಬುದು ಸುಳ್ಳು. ಬೆಂಬಲ ನೀಡುತ್ತಿರುವವರು ಒರಿಜಿನಲ್ ರೈತರಲ್ಲ ಎಂದರು. ಈ ಸರ್ಕಾರ ಬೀದರ್ನಿಂದ ಹಿಡಿದು ಚಾಮರಾಜ ನಗರದ ವರೆಗೆ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ. ಈ ಸರ್ಕಾರ ಮನೆಗೆ ಹೋಗುವುದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.
ಕೇಂದ್ರ ಸರ್ಕಾರ ತೈಲ ಬೆಲೆ ಏರಿಸಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಇದರಿಂದ ಲಾಭವಿಲ್ಲ. ಆರು ಸಾವಿರದಿಂದ ಏಳು ಸಾವಿರ ಕೋಟಿ ಆದಾಯ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಇದರ ಬಗ್ಗೆ ಮನೆ ಹಾಳ ಕಾಂಗ್ರೆಸ್ಗೆ ಬುದ್ಧಿ ಬಂದಿಲ್ಲ ಎಂದರು. ಕಾಕ್ರೋಚ್ ಜನತಾ ಪಾರ್ಟಿ ಜನಪ್ರಿಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿಟ್ ಹೊಡೆದರೆ ಕಾಕ್ರೋಚ್ ಹೋಗಲಿದೆ. ಆಮ್ ಆದ್ಮಿ ಮತ್ತು ಕಾಂಗ್ರೆಸ್ ಎರಡು ಕಾಕ್ರೋಚ್ಗಳು ಎಂದರು.


