Homeಕರ್ನಾಟಕಮಾತನಾಡದೆ ಅಂತರ ಕಾಯ್ದುಕೊಂಡಿದ್ದ ಯುವತಿಯನ್ನು ಕೊಂದ ಪ್ರೇಮಿ

ಮಾತನಾಡದೆ ಅಂತರ ಕಾಯ್ದುಕೊಂಡಿದ್ದ ಯುವತಿಯನ್ನು ಕೊಂದ ಪ್ರೇಮಿ

ಕಳೆದ ಎರಡು ತಿಂಗಳುಗಳಿಂದ ಮಾತನಾಡದೆ ಅಂತರ ಕಾಯ್ದುಕೊಂಡಿದ್ದ ಪ್ರಿಯತಮೆಯನ್ನು ರೊಚ್ಚಿಗೆದ್ದ ಪ್ರೇಮಿ ಟೆಕ್ಕಿಯೊಬ್ಬ ಮೋಸದಿಂದ ಹತ್ಯೆ ಮಾಡಿದ್ದಾನೆ.

ಪ್ರಿಯತಮೆಯನ್ನು ಹೊಟೇಲ್ ವೊಂದಕ್ಕೆ ಕರೆಯಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ. ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿಯ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿ ಶವ ಪತ್ತೆಯಾಗಿದೆ.

25 ವರ್ಷದ ಆರೋಪಿ ಯಶಸ್, ಟೆಕ್ಕಿಯಾಗಿದ್ದಾನೆ. ಆತ ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಹರಿಣಿ ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಕೆಂಗೇರಿ ನಿವಾಸಿಗಳು ಎಂಬುದು ತಿಳಿದುಬಂದಿದೆ.

ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ದೂರ ಉಳಿದಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ದಕ್ಷಿಣ ಡಿಸಿಪಿ ಲೋಕೇಶ್ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments