Homeಕರ್ನಾಟಕನೂರು ಕೋಟಿ ಹುಡುಗಾಟವಲ್ಲ, ಅಮಿತ್ ಶಾ ಹೇಳಿದಂತೆ ದೇವರಾಜೇಗೌಡ ನುಡಿಯುತ್ತಿದ್ದಾರೆ: ಸಚಿವ ಪ್ರಿಯಾಂಕ್‌ ಖರ್ಗೆ

ನೂರು ಕೋಟಿ ಹುಡುಗಾಟವಲ್ಲ, ಅಮಿತ್ ಶಾ ಹೇಳಿದಂತೆ ದೇವರಾಜೇಗೌಡ ನುಡಿಯುತ್ತಿದ್ದಾರೆ: ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯ ಭೀಕರ ಬರವನ್ನು ಎದುರಿಸುತ್ತಿದೆ. ದೇವರಾಜೇಗೌಡ ಉಲ್ಲೇಖಿಸಿದ ನಾಲ್ವರು ಸಚಿವರಿಗೆ ಬೇರೆ ಕೆಲಸ ಇಲ್ವಾ? ಇದನ್ನೆಲ್ಲಾ ನಿರ್ದೇಶನ ಮಾಡುತ್ತಿರುವುದು ಅಮಿತ್ ಶಾ ಎಂದು ದೇವರಾಜೇಗೌಡ ಈ ಹಿಂದೆ ಹೇಳಿದ್ದರು. ಹೀಗಿರುವಾಗ, ಅಮಿತ್ ಶಾ ಅವರೇ ದೇವರಾಜೇಗೌಡರ ಬಾಯಿಯಿಂದ ಈ ಎಲ್ಲ ಮಾತನ್ನು ಹೇಳಿಸಿರುವ ಸಾಧ್ಯತೆ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಮುಖಂಡ ದೇವರಾಜೇಗೌಡನ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಪ್ರಿಯಾಂಕ್‌ ಖರ್ಗೆ, “ದೇವರಾಜೇಗೌಡರು ವಕೀಲರು, ನ್ಯಾಯಾಧೀಶರ ಮುಂದೆನೇ ಸಾಕ್ಷಿ ಸಮೇತ ಹೇಳಿಕೆಯನ್ನು ನೀಡಬಹುದಾಗಿತ್ತಲ್ಲವೇ? ಮಾಧ್ಯಮಗಳ ಮುಂದೆ ಒಂದು, ಕೋರ್ಟ್ ನಲ್ಲಿ ಇನ್ನೊಂದು ಹೇಳಿಕೆಯನ್ನು ನೀಡಿದರೆ, ಇವರ ಮಾತನ್ನು ನಂಬಲು ಸಾಧ್ಯ?” ಎಂದರು.

“ನೂರು ಕೋಟಿ ಏನು ಹುಡುಗಾಟವಲ್ಲ. ಅಮಿತ್ ಶಾ ಅವರಿಗೆ ಈ ರೀತಿ ಆಫರ್ ಇದೆ, ಇಡಿ ಅಥವಾ ಐಟಿ ದಾಳಿ ನಡೆಸಿ ಎಂದು ಮನವಿ ಮಾಡಬೇಕಾಗಿತ್ತು. ಬಿಜೆಪಿ ಅಥವಾ ಜೆಡಿಎಸ್ ಅವರಿಗೆ ಇದು ಬರೀ ರಾಜಕೀಯ. ಕುಟುಂಬಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಬೇಕು ಎಂದು ಅವರಿಗಿಲ್ಲ” ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದರು.

“ಎಸ್‌ಐಟಿ ಒಂದು ಸರ್ಕಾರಿ ಸಂಸ್ಥೆ, ಸಿಬಿಐನಿಂದ ಮಾತ್ರ ನ್ಯಾಯ ಸಿಗುತ್ತದೆ ಎನ್ನುವುದು ತಪ್ಪಲ್ಲವೇ, ಅಮಿತ್ ಶಾ ಜೊತೆ ನೇರ ಸಂಪರ್ಕದಲ್ಲಿ ಅವರಿದ್ದಾರಲ್ಲವೇ, ನೂರು ಕೋಟಿ ಆಫರ್ ಬಗ್ಗೆ ಅವರಿಗೆ ತಿಳಿಸಬೇಕಾಗಿತ್ತು” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದೇವರಾಜೇಗೌಡ ಆರೋಪವೇನು?

ಹಾಸನ ಜೆಎಂಎಫ್‌ಸಿ ಕೋರ್ಟ್‌ ಹೊರಗೆ ಪೊಲೀಸ್‌ ವ್ಯಾನ್‌ನೊಳಗಿದ್ದ ವೇಳೆಯಲ್ಲಿಯೇ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, “ಎಲ್.ಆರ್. ಶಿವರಾಮೇಗೌಡ ಮೂಲಕ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ” ಎಂದು ಹೇಳಿದರು.

“ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದ್ದರು. ನೀನು ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಹೇಳು. ಪೆನ್‌ಡ್ರೈವ್‌ನ ಕುಮಾರಸ್ವಾಮಿ ಹಂಚಿದ್ದರು ಅಂತ ಹೇಳು. ನಿನಗೆ ಸಮಸ್ಯೆ ಆಗಲ್ಲ. ಸೆಕ್ಯೂರ್ ಮಾಡ್ತೀನಿ ಅಂತ ಭರವಸೆ ನೀಡಿದ್ದರು” ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments