RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ. RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ. ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷ ಏಕೆ ಬೇಕಾಯಿತು ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅವರು ನಿಜವಾಗಿ ಯಾರ ಸಂವಿಧಾನಕ್ಕೆ ನಿಷ್ಠೆ ತೋರುತ್ತಾರೆ — ಬಾಬಾಸಾಹೇಬರ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ. ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು, ತೆರಿಗೆ ಪಾವತಿಸಲು ಏಕೆ ನಿರಾಕರಿಸುತ್ತಾರೆ ಎಂದು RSSನ ಪ್ರಶ್ನಿಸಿದರೆ – ಬಿಜೆಪಿ ಬುಸುಗುಡುತ್ತದೆ ಎಂದು ಕುಟುಕಿದ್ದಾರೆ.
RSS ಬೋಧಿಸುವುದನ್ನು RSSಗೇ ಪಾಲಿಸುವಂತೆ ಕೇಳಿಕೊಂಡರೆ – ಬಿಜೆಪಿ ಬುಸುಗುಡುತ್ತದೆ. ಬಿಜೆಪಿ ಎಂದಿಗೂ ಕೇವಲ RSSನ ಜೊತೆಗಾರನನ್ನ, ಬದಲಿಗೆ ಅದು ಸದಾ RSS ನ ಸಾಧನ ಆಗಿದೆ. ಬಿಜೆಪಿಯ ಪ್ರತಿ ಬುಸುಗುಡುವಿಕೆ, ಅದರ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.


