Homeದೇಶಬಾಂಗ್ಲಾದೇಶ | ಪದ್ಮಾ ನದಿಗೆ ಉರುಳಿದ ಬಸ್, 40ಕ್ಕೂ ಹೆಚ್ಚು ಮಂದಿ ನಾಪತ್ತೆ

ಬಾಂಗ್ಲಾದೇಶ | ಪದ್ಮಾ ನದಿಗೆ ಉರುಳಿದ ಬಸ್, 40ಕ್ಕೂ ಹೆಚ್ಚು ಮಂದಿ ನಾಪತ್ತೆ

ಪ್ರಯಾಣಿಕ ಬಸ್ ವೊಂದು ಪದ್ಮಾ ನದಿಗೆ ಉರುಳಿ ಬಿದ್ದು 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಧಾರುಣ ಘಟನೆ ಬುಧವಾರ ಬಾಂಗ್ಲಾದೇಶದಲ್ಲಿ ನಡೆದಿದೆ.

ಕೆಂಪು ಬಣ್ಣದ ಖಾಸಗಿ ಪ್ರಯಾಣಿಕ ಬಸ್ ನಿಯಂತ್ರಣ ತಪ್ಪಿ ನದಿಗೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಬೃಹತ್ ಸಾರಿಗೆ ಧೋಣಿ (Ferry) ಹತ್ತಲು ಬಸ್ ಪ್ರಯತ್ನಿಸುವಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ದುರಂತ ನಡೆಯುವ ಸಂದರ್ಭದಲ್ಲಿ ಬಸ್ ನಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ. ಅಪಘಾತದ ಸಮಯದಲ್ಲಿ ಕನಿಷ್ಠ 40 ಪ್ರಯಾಣಿಕರು ಬಸ್‌ನಲ್ಲಿದ್ದರು. ಈ ಪೈಕಿ 11 ಪ್ರಯಾಣಿಕರು ಸುರಕ್ಷಿತವಾಗಿ ಈಜಿ ದಡಸೇರುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಅಪಘಾತದ ನಂತರ ಆರಂಭದಲ್ಲಿ ಎರಡು ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಬಳಿಕ 18 ಶವಗಳನ್ನು ಕಾರ್ಯಾಚರಣೆ ಮೂಲಕ ಮೇಲಕ್ಕೆ ಎತ್ತಿದರು.

ನಂತರ, ರಕ್ಷಣಾ ಹಡಗು ಹಮ್ಜಾ ರಾತ್ರಿ 11.50 ಕ್ಕೆ ಮುಳುಗಿದ ಬಸ್ ಅನ್ನು ಮೇಲಕ್ಕೆತ್ತಿತು. ಈ ಸಮಯದಲ್ಲಿ ಇನ್ನೂ 16 ಶವಗಳು ಪತ್ತೆಯಾಗಿವೆ ಎಂದು ರಾಜ್‌ಬರಿ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಉಪ ಸಹಾಯಕ ನಿರ್ದೇಶಕ ದಿವಾನ್ ಸೊಹೆಲ್ ರಾಣಾ ತಿಳಿಸಿದ್ದಾರೆ.

ಮೃತರಲ್ಲಿ ನಾಲ್ವರು ಪುರುಷರು, ಹತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರನ್ನು ರೆಹೆನಾ ಬೇಗಂ (60) ಮತ್ತು ಮರ್ಜಿನಾ ಬೇಗಂ (55) ಎಂದು ಗುರುತಿಸಲಾಗಿದೆ ಎಂದು ದೌಲತ್ಡಿಯಾ ಉಪಜಿಲ್ಲಾ ಆರೋಗ್ಯ ಸಂಕೀರ್ಣದ ನಿವಾಸ ವೈದ್ಯಾಧಿಕಾರಿ ಡಾ. ಎಂ.ಡಿ. ಶರೀಫುಲ್ ಇಸ್ಲಾಂ ದೃಢಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments