Homeದೇಶಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ

ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ

ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಭೀಕರ ವೈಮಾನಿಕ ದಾಳಿ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಶನಿವಾರ ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್ ಸ್ಟೇಟ್ ಮೀಡಿಯಾ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಂದು ಇರಾನ್‌ನ ಪ್ರಮುಖ ಯುರೇನಿಯಂ-ಪುಷ್ಟೀಕರಣ ಸ್ಥಾವರದ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿವೆ ಎಂದು ವರದಿ ತಿಳಿಸಿದೆ.

ಇರಾನ್‌ನ ಅತ್ಯಂತ ಮಹತ್ವದ ಪರಮಾಣು ಸ್ಥಾವರಗಳಲ್ಲಿ ಒಂದಾದ ನಟಾಂಜ್ ಪರಮಾಣು ಸ್ಥಾವರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಸ್ನಿಮ್ ವರದಿ ಮಾಡಿದೆ.

ದಾಳಿಯ ನಂತರ ಯಾವುದೇ ವಿಕಿರಣ ಸೋರಿಕೆ ಪತ್ತೆಯಾಗಿಲ್ಲ ಮತ್ತು ಸ್ಥಾವರದ ಬಳಿ ವಾಸಿಸುವ ನಿವಾಸಿಗಳು ಅಪಾಯದಲ್ಲಿಲ್ಲ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಆದಾಗ್ಯೂ ಸ್ಥಳೀಯ ನಿವಾಸಿಗಳು ವಿಕಿರಣ ಸೋರಿಕೆಯ ಆತಂಕದಲ್ಲಿದ್ದಾರೆ.

ದಾಳಿಗೆ ಒಳಗಾದ ನಟಾಂಜ್ ಪರಮಾಣು ಸ್ಥಾವರ ಇರಾನ್‌ ರಾಜಧಾನಿ ಟೆಹ್ರಾನ್‌ನಿಂದ ಸುಮಾರು 220 ಕಿಮೀ ದೂರದಲ್ಲಿದೆ.

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಟಾಂಜ್ ಸೌಲಭ್ಯವನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದ್ದು, ಜೂನ್ 2025 ರ ಇಸ್ರೇಲ್-ಇರಾನ್ 12 ದಿನಗಳ ಯುದ್ಧದ ಸಮಯದಲ್ಲೂ ಇಸ್ರೇಲ್ ಪಡೆಗಳು ಇರಾನಿನ ಮಿಲಿಟರಿ ಮತ್ತು ಪರಮಾಣು ಮೂಲಸೌಕರ್ಯದ ಮೇಲೆ ಸರಣಿ ದಾಳಿ ನಡೆಸಿದ್ದವು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments