Homeಕರ್ನಾಟಕಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ, ತಾಕತ್ತಿದ್ದರೆ ತಡೀಲಿ: ಪ್ರಮೋದ್ ಮುತಾಲಿಕ್

ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ, ತಾಕತ್ತಿದ್ದರೆ ತಡೀಲಿ: ಪ್ರಮೋದ್ ಮುತಾಲಿಕ್

ನಾವು ಹಿಂದೂ ರಾಷ್ಟ್ರ ಮಾಡಿಯೇ ತೀರುತ್ತೇವೆ. ಕಾಂಗ್ರೆಸ್‌ಗೆ ತಾಕತ್ತಿದ್ದರೆ ತಡೀಲಿ ನೋಡೋಣ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಶ್ರೀಕಾಂತ್ ಪೂಜಾರಿ ನಿವಾಸಕ್ಕೆ ಪ್ರಮೋದ್ ಮುತಾಲಿಕ್ ಭೇಟಿ ಅವರು ಕುಟುಂಬಸ್ಥರಿಗೆ ಸಮಾಧಾನ ಹೇಳಿದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿ, “ಸರ್ಕಾರ ಏನು ಮಾಡುತ್ತದೋ ನಾವು ನೋಡಿಯೇ ತೀರುತ್ತೇವೆ. 2024ರಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ ನಂತರ ಭಾರತ ಹಿಂದೂ ರಾಷ್ಟ್ರ ಆಗುತ್ತದೆ. ಪಾಕಿಸ್ತಾನ ಮುಸ್ಲಿಮರ ದೇಶ ಆಗುವುದಾದರೆ ಭಾರತ ಹಿಂದೂ ರಾಷ್ಟ್ರ ಏಕಾಗಬಾರದು” ಎಂದರು.

“ರಾಮಜನ್ಮಭೂಮಿ ಹೋರಾಟದಲ್ಲಿ ಶ್ರೀಕಾಂತ್ ಪೂಜಾರಿ ಭಾಗಿಯಾಗಿದ್ದರು. ಆದರೆ ಅವರ ಕುರಿತು ಇಲ್ಲ ಸಲದ ಆರೋಪ ಮಾಡುತ್ತಿದ್ದಾರೆ. ಶ್ರೀಕಾಂತ್‌ ವಿರುದ್ಧ ದೊಂಬಿ ಗಲಿಭೆ ಪ್ರಕರಣ ದಾಖಲಾಗಿದ್ದವು ಎಂದು ಹೇಳುತ್ತಿದ್ದಾರೆ. ಅದೆಲ್ಲ ಸುಳ್ಳು . ರಾಮಭಕ್ತ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯಾಗಿ ಬಂಧನ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.

“ಶ್ರೀಕಾಂತ ದುಡಿಯುವವನು. ಬಿಡುಗಡೆ ಆಗುತ್ತೋ ಇಲ್ವಿಇಲ್ವೋ ಅಂತಾ ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ್ ಸೇನೆ ಖಂಡಿಸುತ್ತದೆ. ಸಿಎಂ, ಗೃಹ ಮಂತ್ರಿ ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸ್ತಿದ್ದಾರೆ. ಅಬ್ಬಯ್ಯ ನೋ ಅಬ್ದುಲ್ಲಾ ನೋ ಗೊತ್ತಿಲ್ಲ. ಅವರು ದಾರಿ ತಪ್ಪಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

“ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕಿ ಭ್ರಷ್ಟಾಚಾರ ಮಾಡುತ್ತಿದೆ. ಬೇರೆಯವರು ದುಡ್ಡು ಕೊಟ್ಟಿದ್ದು ಅದಕ್ಕೆ ಬಂಧನ ಮಾಡಿಲ್ಲ, ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಬಂಧನ ಮಾಡಿದ್ದಾರೆ. ದೊಂಬಿ ಕೇಸ್ ಅಂತಾ ಹಾಕಿದ್ದಾರೆ. 13 ಜನ ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದಾರೆ” ಎಂದರು.

“ಯಾವ ಆಧಾರದ ಮೇಲೆ ದೊಂಬಿ ಕೇಸ್ ಅಂತಾರೆ. ಇಡೀ ದೇಶ ರಾಮಮಯ ಆಗಿದೆ ಅದಕ್ಕೆ ಹೊಟ್ಟೆ ಊರಿ ಆಗಿದೆ. ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಅವರ ಮೇಲೆ ರೌಡಿ ಶೀಟರ್ ಇಲ್ಲ ಮುಖ್ಯಮಂತ್ರಿಗಳೇ, ಆತ ಅಪರಾಧಿ ಅಲ್ಲ ಆರೋಪಿ. ಕೋರ್ಟ್ ಯಾವುದೇ ಕೇಸ್ ನಲ್ಲೂ ಅಪರಾಧಿ ಅಂದಿಲ್ಲ. ನಿಮ್ಮ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ” ಗೋಧ್ರಾ ಮಾದರಿಯಲ್ಲಿ ದಾಂಧಲೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ವಿಚಾರ ಏನು? ಗೋದ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್ ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡ್ತಿದ್ರಾ? ಅಥವಾ ನೀವೇನಾದ್ರೂ ಪ್ಲ್ಯಾನ್ ಮಾಡ್ತಿದ್ದೀರಾ ಗಲಭೆ ಎಬಿಸಲು” ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments