Homeಕರ್ನಾಟಕನಾನು ಲೋಕಸಭೆ ಸ್ಪರ್ಧಿಸುವುದಿಲ್ಲ, ಪಕ್ಷದ ಕಾರ್ಯಕರ್ತರಿಗೆ ಅವಕಾಶ: ಸಚಿವ ಸತೀಶ್​​​ ಜಾರಕಿಹೊಳಿ

ನಾನು ಲೋಕಸಭೆ ಸ್ಪರ್ಧಿಸುವುದಿಲ್ಲ, ಪಕ್ಷದ ಕಾರ್ಯಕರ್ತರಿಗೆ ಅವಕಾಶ: ಸಚಿವ ಸತೀಶ್​​​ ಜಾರಕಿಹೊಳಿ

ನಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಬಾರಿ ಅವಕಾಶ ಸಿಗಲಿದೆ. ನನಗೆ ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್​​​ ಜಾರಕಿಹೊಳಿ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು, ನಮ್ಮ ಕುಟುಂಬದ ಸದಸ್ಯರು ಯಾರೂ ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ. ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ” ಎಂದರು.

ರಾಮಮಂದಿರ ಉದ್ಘಾಟನೆ ಆಮಂತ್ರಣದ ಬಗ್ಗೆ ಮಾತನಾಡಿ, ” ರಾಮಮಂದಿರ ಉದ್ಘಾಟನೆ ಒನ್​ ಮ್ಯಾನ್​ ಶೋ ಆಗುತ್ತಿದೆ. ಕಾರ್ಯಕ್ರಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಇನ್ನೂ ಸಮಯ ಇದೆ ಆಹ್ವಾನ ಕೊಡಲಿ. ಯಾವ ಸಿಎಂಗೂ ಆಹ್ವಾನ ಕೊಟ್ಟಿಲ್ಲ. ಉತ್ತರ ಪ್ರದೇಶ ಸಿಎಂಗೆ ಮಾತ್ರ ಆಹ್ವಾನ ಇದೆ. ನನಗೆ ಆಹ್ವಾನ ಬಂದ್ರೆ ಹೋಗಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಇದೆ, ಅಲ್ಲೇ ಪೂಜೆ ಮಾಡುತ್ತೇನೆ. ಸದ್ಯ ರಶ್ ಇರುತ್ತೆ, ಮುಂದೆ ಯಾವಾಗಾದರೂ ಹೋಗುವೆ” ಎಂದು ಹೇಳಿದರು.

ಶ್ರೀಕಾಂತ್ ಪೂಜಾರಿ ಬಂಧನ ಬಗ್ಗೆ ಪ್ರತಿಕ್ರಿಯಿಸಿ, “ಹಳೇ ಕೇಸ್ ಗಳಿವೆ ಎಂದು ಪೋಲಿಸರು ಬಂಧಿಸಿದ್ದಾರೆ. ಇದರಲ್ಲಿ ಗೊಂದಲ ಮಾಡುವ ಅವಶ್ಯಕತೆ ಇಲ್ಲ. ಸರಿಯಾದ ರೀತಿಯಲ್ಲಿ ಇದ್ದರೆ ಪ್ರತಿಭಟನೆ ನಡೆಸಲಿ. ಜನರ ಸಮಸ್ಯೆಗಳ ಸಂಬಂಧ ಪ್ರತಿಭಟನೆ ನಡೆಸಲಿ. ಅದು ಬಿಟ್ಟು ಪ್ರಕರಣಗಳಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ಮಾಡ್ತಿದಾರೆ. ಬೆಳಕು ಚೆಲ್ಲಲು ಕರ್ನಾಟಕದಲ್ಲಿ ಸಾಕಷ್ಟು ವಿಷಯಗಳಿವೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments