ಶ್ರೀನಿವಾಸಪುರ: ಕಳೆದ ಐದು ತಿಂಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ ಸರ್ಕಲ್‌ನಲ್ಲಿ ಹೈಮಾಸ್ ದೀಪ ಅಳವಡಿಸುವ ಸ್ಥಳದಲ್ಲಿ ರಾತ್ರೋ ರಾತ್ರಿ ನಾಡಪ್ರಭು ಕೆಂಪೇಗೌಡ ಪುತ್ಥಳಿ ನಿರ್ಮಾಣ ಮಾಡಿರುವ ಪ್ರಕರಣ ಈಗ ಹೊಸ ರೂಪ ಪಡೆದುಕೊಂಡಿದೆ.
ವಿವಿಧ ಸಮುದಾಯದ ಮುಖಂಡರು ತಮ್ಮ ತಮ್ಮ ಸಮುದಾಯದ ಮುಖಂಡರುಗಳ ಪುತ್ಥಳಿಗಳನ್ನು ಸ್ಥಾಪಿಸಬೇಕೆಂದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಕುರಿತು ಅದೇ ವೈತ್ತದಲ್ಲಿ ದಲಿತ ಸಮುದಾಯ ಮುಖಂಡರು ಪ್ರತಿಭಟನೆ ನಡೆಸಿ, “ಅಂದು ಸಂಸದ ಮುನಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿದಾಗ ಯಾವುದೇ ಸಮಸ್ಯೆಗಳು ಬೇಡವೆಂದೂ ಉಳಿದ ಸಮುದಾಯಗಳ ಮುಖಂಡುಗಳ ಪುತ್ಥಳಿಗಳು ಇಡಲು ಕಲ್ಯಾಣಿಯ ಸ್ವಲ್ಪ ಜಾಗವನ್ನು ಮೀಸಲಿಡಲಾಗಿದೆಯೆಂದು ಹೇಳಿದ್ದರು. ತಮ್ಮ ಬೆಂಬಲಿಗರಿಗೆ ಕಲ್ಯಾಣಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ನಮ್ಮ ಸಮುದಾಯದ ಮುಖಂಡರುಗಳ ಪುತ್ಥಳಿಗಳಿಗೆ ಅವಕಾಶ ಮಾಡಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಇದೇ ವೇಳೆ” ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸಮುದಾಯದ ಮುಖಂಡರಾದ ರಾಮಾಂಜಮ್ಮ, ಈರಪ್ಪ, ವಕೀಲರಾದ ನಾಗರಾಜು ಹಾಗೂ ಬಲಜಿಗ ಸಮುದಾಯದ ನಾರಾಯಣಸ್ವಾಮಿ, ಕೈಷ್ಣಪ್ಪ ಹಾಗೂ ನಾಯಕ ಸಮುದಾಯದ ಬಾರ್ ಶ್ರೀನಿವಾಸ್, ನಾಗನಾಯಕನಹಳ್ಳಿ ಆಂಜಪ್ಪ ಮತ್ತಿತರರಿದ್ದರು.