Homeರಾಜಕೀಯಶೃಂಗೇರಿ ಮತ ಎಣಿಕೆ ಪ್ರಕರಣ | ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್ಐಆರ್

ಶೃಂಗೇರಿ ಮತ ಎಣಿಕೆ ಪ್ರಕರಣ | ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್ಐಆರ್

ಶೃಂಗೇರಿ ಮತ ಎಣಿಕೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇರೆಗೆ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಶೃಂಗೇರಿ (Sringeri) ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿಎನ್ ಜೀವರಾಜ್ (DN Jeevaraj) ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು (Chikkamagaluru) ನಗರ ಠಾಣೆಗೆ ಅಂಚೆ ಮತ ಎಣಿಕೆ ಟೇಬಲ್‌ನ ಎಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ಅವರು ದೂರು ನೀಡಿದ್ದಾರೆ. ದೂರಿನನ್ವಯ ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕ್ ಓಪನ್ ಆಗಿತ್ತು, ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ.

2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ 59171 ಮತ ಪಡೆದು ವಿಜಯ ಗಳಿಸಿದ್ದರು.ಬಿಜೆಪಿಯ ಜೀವರಾಜ್ ಗಳಿಸಿದ್ದು 58970 ಮತಗಳು.ಗೆಲುವಿನ ಅಂತರ 201 ಮತಗಳು. ಆಗ ಚಲಾವಣೆ ಆದ ಅಂಚೆ ಮತಗಳು 1822.ಇದರಲ್ಲಿ ಜೀವರಾಜ್ 692 ಮಾತ ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು.ಆಗ 279 ಮತ ತಿರಸ್ಕೃತ ಆಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments