Homeಕರ್ನಾಟಕರಾಜಧಾನಿಯ 30 ಕಡೆಗಳಲ್ಲಿ 'ಸೇಫ್ಟಿ ಐಲ್ಯಾಂಡ್' ವ್ಯವಸ್ಥೆ: ಸಚಿವ ಪರಮೇಶ್ವರ್​

ರಾಜಧಾನಿಯ 30 ಕಡೆಗಳಲ್ಲಿ ‘ಸೇಫ್ಟಿ ಐಲ್ಯಾಂಡ್’ ವ್ಯವಸ್ಥೆ: ಸಚಿವ ಪರಮೇಶ್ವರ್​

ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗೆ ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಪರಮೇಶ್ವರ್​ ತಿಳಿಸಿದರು.

ವಿಧಾನಪರಿಷತ್​ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಅವರು, “ಬೆಂಗಳೂರಿನಲ್ಲಿ 7500 ಕ್ಯಾಮೆರಾಗಳು ಇವೆ. ನಗರದ ನಿಗದಿತ ಪ್ರದೇಶದಲ್ಲಿ ಅಲಾರಾಂ ಇರಲಿದೆ. ಇವುಗಳ ಮೇಲೆ 24 ಗಂಟೆ ನಿಗಾ ಇರಲಿದೆ” ಎಂದರು.

“ಸೇಫ್ಟಿ ಐಲ್ಯಾಂಡ್‌ಗಳು ಟಿಲಿಪೋನ್‌ ಬೂತ್‌ ಮಾದರಿಯಲ್ಲಿವೆ. ಅಲ್ಲಿರುವ ಬಟನ್ ಒತ್ತಿದರೆ 7 ನಿಮಿಷದೊಳಗೆ ತಕ್ಷಣ ಪೊಲೀಸರು ಸ್ಥಳಕ್ಕೆ ಬರುತ್ತಾರೆ. ಅಪರಾಧಿಗಳನ್ನು ಹಿಡಿಯಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕೂಡ ಬಳಕೆ ಮಾಡುತ್ತಿದ್ದೇವೆ” ಎಂದು ಹೇಳಿದರು.

ಸೇಫ್ಟಿ ಐಲ್ಯಾಂಡ್‌ಗಳ ಬಳಕೆ ಹೆಚ್ಚುತ್ತಿದೆ. ಮೊನ್ನೆ ಹೊರ ದೇಶದ ಪ್ರಜೆಯೊಬರು ಪರ್ಸ್‌ ಕಳೆದುಕೊಂಡು ಸೇಫ್ಟಿ ಐಲ್ಯಾಂಡ್‌ ಬಳಸಿಕೊಂಡಿದ್ದರು. ಕೂಡಲೇ ಆ ಪರ್ಸ್‌ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿಬಿದ್ದ” ಎಂದು ವಿವರಿಸಿದರು.

ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಹೇಗಿರಲಿದೆ?

ನೀಲಿ ಬಣ್ಣದಲ್ಲಿರುವ ಟೆಲಿಫೋನ್ ಬೂತ್‌ನಂತಹ ರಚನೆ ಹೊಂದಿರುವ ಸೇಫ್ಟಿ ಐಲ್ಯಾಂಡ್​​ ಯಾರಾದರೂ ಸಂಕಷ್ಟದಲ್ಲಿರುವಾಗ ಅಥವಾ ಅವರ ಮೊಬೈಲ್ ಫೋನ್‌ ಸಂಪರ್ಕ ಸಾಧ್ಯವಾಗದಿದ್ದಾಗ ಅವರು ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಲು ಈ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಸಬಹುದು.

ಪ್ರತಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಸಿಸಿಟಿವಿ ಹೊಂದಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ. ಬಳಕೆದಾರರು ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಬಂದು ಬಟನ್ ಒತ್ತಬೇಕು. ಇದು ಸಮೀಪದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯನ್ನು ತಿಳಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ಆಗಮಿಸುತ್ತಾರೆ.

ಬೆಂಗಳೂರಿನಲ್ಲಿ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗಳಿಗಾಗಿ ನಗರ ಪೊಲೀಸರು ಈಗಾಗಲೇ ತುರ್ತು ಟೋಲ್ ಫ್ರೀ ಸಂಖ್ಯೆ 112 ಅನ್ನು ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಐಟಿ ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸಾರ್ವಜನಿಕರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಹೆಚ್ಚುವರಿ ರಸ್ತೆ ಸಾಧನಗಳಾಗಿವೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments