Homeಕರ್ನಾಟಕನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರಿಗೆ ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರಿಗೆ ಯಾವ ಖಾತೆ?

ಮುಖ್ಯಮಂತ್ರಿ ಬದಲಾವಣೆಯೊಂದಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟದ 13 ಸಚಿವರಿಗೆ ಕೊನೆಗೂ ಸಿಎಂ ಡಿ.ಕೆ. ಶಿವಕುಮಾ‌ರ್ ಅವರು ಖಾತೆಗಳನ್ನು ಗುರುವಾರ (ಜೂ.4) ಹಂಚಿಕೆ ಮಾಡಿದ್ದು ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಪಟ್ಟಿಯನ್ನು ರವಾನಿಸಲಾಗಿದೆ.

ದೀರ್ಘಕಾಲದ ಚರ್ಚೆ ಹಾಗೂ ಹೈಕಮಾಂಡ್ ಜೊತೆಗಿನ ಸಮಾಲೋಚನೆಯ ನಂತರ, ಆಡಳಿತದಲ್ಲಿ ವೇಗ ತರಲು ಮತ್ತು ವಿವಿಧ ಸಮುದಾಯಗಳ ಸಮತೋಲನ ಕಾಯ್ದುಕೊಳ್ಳಲು ಮುಖ್ಯಮಂತ್ರಿಗಳು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಮುಖ ಖಾತೆಗಳನ್ನು ಹಿರಿಯ ಮತ್ತು ಅನುಭವಿ ನಾಯಕರಿಗೆ ಹಂಚಿಕೆ ಮಾಡಲಾಗಿದ್ದು, ಕೆಲ ಹೊಸ ಮುಖಗಳಿಗೂ ಜವಾಬ್ದಾರಿ ನೀಡಲಾಗಿದೆ.

ಯಾರಿಗೆ ಯಾವ ಖಾತೆ

– ಡಿ.ಕೆ. ಶಿವಕುಮಾರ್ (ಸಿಎಂ) – ಗುಪ್ತಚರ, ಹಣಕಾಸು
– ಡಾ.ಜಿ.ಪರಮೇಶ್ವರ್ (ಡಿಸಿಎಂ)- ಕಂದಾಯ
– ಕೆ.ಎಚ್. ಮುನಿಯಪ್ಪ – ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ
– ಕೆ.ಜೆ. ಜಾರ್ಜ್- ಇಂಧನ
– ಎಂ.ಬಿ. ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ
– ರಾಮಲಿಂಗಾರೆಡ್ಡಿ – ಜಲಸಂಪನ್ಮೂಲ
– ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
– ಕೃಷ್ಣ ಭೈರೇಗೌಡ- ಬೆಂಗಳೂರು ಅಭಿವೃದ್ಧಿ
– ಪ್ರಿಯಾಂಕ್ ಖರ್ಗೆ – ಗೃಹ, ಐಟಿಬಿಟಿ
– ಯು.ಟಿ. ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
– ಈಶ್ವರ ಖಂಡ್ರೆ – ಗ್ರಾಮೀಣಾಭಿವೃದ್ಧಿ
– ಡಾ. ಯತೀಂದ್ರ – ನಗರಾಭಿವೃದ್ಧಿ
– ಭೈರತಿ ಸುರೇಶ್ – ಸಾರಿಗೆ
– ಡಾ. ಶರಣಪ್ರಕಾಶ ಪಾಟೀಲ – ವೈದ್ಯಕೀಯ ಶಿಕ್ಷಣ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments