Homeಕರ್ನಾಟಕಮೈಸೂರು ಕಾಗದ ಕಾರ್ಖಾನೆ ಆರಂಭಕ್ಕೆ ಸರ್ಕಾರ ಸಕಾರಾತ್ಮಕ ಚಿಂತನೆ: ಸಚಿವ ಎಂ ಬಿ ಪಾಟೀಲ

ಮೈಸೂರು ಕಾಗದ ಕಾರ್ಖಾನೆ ಆರಂಭಕ್ಕೆ ಸರ್ಕಾರ ಸಕಾರಾತ್ಮಕ ಚಿಂತನೆ: ಸಚಿವ ಎಂ ಬಿ ಪಾಟೀಲ

ಭದ್ರಾವತಿಯಲ್ಲಿರುವ ಮೈಸೂರು ಕಾಗದ ಕಾರ್ಖಾನೆಯ ಪುನರಾರಂಭಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಚಿಂತನೆ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಸದಸ್ಯ ಎಸ್ ರುದ್ರೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, “ಮೈಸೂರು ಕಾಗದ ಕಾರ್ಖಾನೆಯು ತೀವ್ರ ತರಹದ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಕಾರಣ ಎಲ್ಲಾ ಉತ್ಪಾದನಾ ಘಟಕಗಳನ್ನು 21-11-2015 ರಿಂದ ಸ್ಥಗಿತಗೊಳಿಸಿದ್ದು, ಜೂನ್ 2023 ಅಂತ್ಯಕ್ಕೆ ಒಟ್ಟು ಸಂಚಿತ ನಷ್ಠ 1,482 ಕೋಟಿ ರೂ. ಆಗಿದೆ” ಎಂದು ಹೇಳಿದರು.

“ಸರ್ಕಾರವು ಕಾರ್ಖಾನೆಯ ಪುನರುಜ್ಜಿವನ ಸಾಧ್ಯವಿಲ್ಲವೆಂದು ತೀರ್ಮಾನಿಸಿ ಕಾರ್ಖಾನೆಯ ಕಾರ್ಯಚಟುವಟಿಕೆ ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಬೇಕೆಂದು ತೀರ್ಮಾನ ಕೈಗೊಂಡು, ಈ ಪ್ರಕ್ರಿಯೆಗಳಿಗೆ ಐಡೆಕ್‌ನ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆರ್‌ಎಫ್ ಕ್ಯೂ ಅನ್ನು ಏಪ್ರಿಲ್ 2017,ಆಗಸ್ಟ್ 2018 ಹಾಗೂ ಮಾರ್ಚ್ 2019 ರಲ್ಲಿ ಪ್ರಕಟಿಸಲಾಗಿತ್ತು. ಆರ್‌ಎಫ್ ಕ್ಯೂಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ” ಎಂದರು.

“ಆರ್‌ಎಫ್‌ಕ್ಯೂ ಅನ್ನು ಕಂಪನಿಯು ಮೊದಲೇ ಅಪ್‌ಲೋಡ್ ಮಾಡಲಾಗಿದ್ದು ಆರ್‌ಎಫ್‌ಕ್ಯೂಗಾಗಿ ಪ್ರಚಾರವನ್ನು ಮತ್ತು ಈಗಾಗಲೇ ವ್ಯಾಪಕ ನೀಡಲಾಗಿರುವುದರಿಂದ ಪ್ರಸ್ತಾವನೆಗಾಗಿ ವಿನಂತಿಯನ್ನು (ಆರ್‌ಎಫ್‌ಪಿ) ನೇರವಾಗಿ ದಿನಾಂಕ: 25.11.2020 ರಂದು ಅಪ್‌ಲೋಡ್ ಮಾಡಲಾಗಿದ್ದು, ಇ-ಟೆಂಡರ್ ತೆರೆದಾಗ ಯಾವುದೇ ಸ್ವೀಕೃತವಾಗಿರುವುದಿಲ್ಲ” ಎಂದು ವಿವರಿಸಿದರು.

“ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪೆನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸಿರುತ್ತಾರೆ. ಅದರಂತೆ, ನೀಲಗಿರಿ ಬೆಳೆಯಲು ಎಂಪಿಎಂಗೆ ವಿನಾಯಿತಿ ಮತ್ತು ಬಾಕಿ ಉಳಿದಿರುವ 1,102 ಕೋಟಿಗಳ ಹೊಣೆಗಾರಿಕೆಗಳ ಕುರಿತು ಸರ್ಕಾರವು ತೀರ್ಮಾನ ತೆಗೆದು ಕೊಳ್ಳಬೇಕಾಗಿರುತ್ತದೆ” ಎಂದರು.

“ಕಾರ್ಖಾನೆಯ ಭೂ ಪ್ರದೇಶವನ್ನು ಮೈಸೂರು ಕಾಗದ ಕಾರ್ಖಾನೆಯು ಸಂರಕ್ಷಿಸಿದ್ದು, ನಿರೀಕ್ಷಿತ ಬಿಡ್ಡುದಾರರು ನೀಲಗಿರಿ ಬೆಳೆಯಲು ಎಂಪಿಎ0ಗೆ ವಿನಾಯಿತಿ ಹಾಗೂ ಯಾವುದೇ ಹೊಣೆಗಾರಿಕೆಗಳಿಲ್ಲದ ಕಂಪನಿಯ ಕಾರ್ಯಾಚರಣೆಗಳನ್ನು ನಡೆಸಲು ಬಯಸುವುದರಿಂದ, ಅದರಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದ್ದು, ತದನಂತರ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments