Homeಕರ್ನಾಟಕಸರ್ಕಾರಕ್ಕೆ ₹19.84 ಕೋಟಿ ಲಾಭಾಂಶ ಹಸ್ತಾಂತರಿಸಿದ ಕೆಎಸ್ಐಐಡಿಸಿ

ಸರ್ಕಾರಕ್ಕೆ ₹19.84 ಕೋಟಿ ಲಾಭಾಂಶ ಹಸ್ತಾಂತರಿಸಿದ ಕೆಎಸ್ಐಐಡಿಸಿ

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ನಿಯಮಿತವು 2022-23ನೇ ಆರ್ಥಿಕ ವರ್ಷದಲ್ಲಿ ತಾನು ಗಳಿಸಿರುವ ನಿವ್ವಳ ಲಾಭಾಂಶದಲ್ಲಿ ಶೇಕಡ 30ರಷ್ಟನ್ನು ಡಿವಿಡೆಂಡ್ ಎಂದು ಘೋಷಿಸಿದ್ದು, ಈ ಬಾಬ್ತಿನ ₹19.84 ಕೋಟಿ ರೂ.ಗಳನ್ನು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಅವರು ಗುರುವಾರ ಚೆಕ್ ರೂಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಿದರು.

“ನಿಗಮದಲ್ಲಿ ಸರಕಾರವು 10 ರೂ. ಮುಖಬೆಲೆಯ 69.47 ಕೋಟಿಗೂ ಹೆಚ್ಚು ಷೇರುಗಳನ್ನು ಹೊಂದಿದ್ದು, 2022-23ರಲ್ಲಿ ಇವುಗಳ ಮೌಲ್ಯ 694.70 ಕೋಟಿ ರೂ.ಗಳಿಗೂ ಹೆಚ್ಚಾಗಿತ್ತು. ಫೆ.20ರಂದು ನಡೆದ ನಿಗಮದ ಆಡಳಿತ ಮಂಡಲಿಯ ಸಭೆಯಲ್ಲಿ ಇದರಲ್ಲಿ ಶೇಕಡ 30ರಷ್ಟನ್ನು ಡಿವಿಡೆಂಡ್ ಎಂದು ಘೋಷಿಸುವ ನಿರ್ಣಯವನ್ನು ಮಾಡಲಾಗಿತ್ತು. ಅದರಂತೆ, ಈ ಲಾಭಾಂಶವನ್ನು ಸರಕಾರಕ್ಕೆ ಹಸ್ತಾಂತರಿಸಲಾಗುತ್ತಿದೆ” ಎಂದು ಸಚಿವ ಪಾಟೀಲ್ ತಿಳಿಸಿದ್ದಾರೆ.

ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ ಸಿ ಸತೀಶ್, ಕಾರ್ಯನಿರ್ವಾಹಕ ನಿರ್ದೇಶಕ ಡಿ ಪಿ ಪ್ರಕಾಶ ಮುಂತಾದವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments