Homeಕರ್ನಾಟಕಮತ ಕ್ಷೇತ್ರದ ಹೆಚ್ಚಳ | ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರ: ಹೆಚ್ ಸಿ...

ಮತ ಕ್ಷೇತ್ರದ ಹೆಚ್ಚಳ | ದಕ್ಷಿಣ ರಾಜ್ಯಗಳ ರಾಜಕೀಯ ಶಕ್ತಿಯನ್ನು ದುರ್ಬಲಗೊಳಿಸುವ ಕುತಂತ್ರ: ಹೆಚ್ ಸಿ ಮಹದೇವಪ್ಪ

ಮತ ಕ್ಷೇತ್ರಗಳ ಹೆಚ್ಚಳದ ಮಸೂದೆಯನ್ನು ಈಗಾಗಲೇ ಅನುಮೋದಿತವಾಗಿದ್ದ ಮಹಿಳಾ ಮೀಸಲಾತಿ ಮಸೂದೆಯ ಒಳಗಿಟ್ಟು, ದಕ್ಷಿಣದ ರಾಜ್ಯಗಳನ್ನು ಹಣಿಯಲು ಕ್ಷೇಂದ್ರದ ಬಿಜೆಪಿಗರು ಸಂಚು ರೂಪಿಸಿದ್ದರು ಎಂದು ಸಚಿವ ಹೆಚ್ ಸಿ ಮಹಾದೇವಪ್ಪ ಹೇಳಿದ್ದಾರೆ.

ಈ ಕುರಿತು ಮಾಧ‌್ಯಮ ಪ್ರಕಕಟಣೆ ಹೊರಡಿಸಿರುವ ಅವರು, “ಭಾರತವು ರಾಜಕೀಯವಾಗಿ ಸ್ವಾತಂತ್ರ್ಯ ಗಳಿಸಿದ ಕಾಲದಿಂದ ಇಲ್ಲಿಯವರೆಗೂ ಕೂಡಾ ಜನಸಂಖ್ಯಾ ನಿಯಂತ್ರಣ ಮತ್ತು ಮಾನವ ಸಂಪನ್ಮೂಲಕ ಅಭಿವೃದ್ಧಿಗೆ ಹಲವು ರೀತಿಯ ಪ್ರಯತ್ನಗಳು ನಡೆದಿವೆ” ಎಂದಿದ್ದಾರೆ.

“ಪಂಚವಾರ್ಷಿಕ ಯೋಜನೆಯಿಂದ ಹಿಡಿದು ಈಗಿನ ರಾಜ್ಯಗಳ ಬಜೆಟ್ ನ ವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡರೂ ಸಹ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 193 ದೇಶಗಳ ಪೈಕಿ 130ನೇ ಸ್ಥಾನದಲ್ಲಿದೆ. ವಿಶ್ವದಲ್ಲಣೆ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಕ್ಕೆ ಜನಸಂಖ್ಯೆ ಎಂಬುದು ವರವಾಗಬೇಕಿತ್ತು. ಆದರೆ ಇಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕದ ದರವನ್ನು ಗಮನಿಸಿದರೆ ನಮ್ಮ ದೇಶದ ಮೇಲೆ ಜನಸಂಖ್ಯಾ ಸ್ಪೋಟದ ದುಷ್ಪರಿಣಾಮ ಉಂಟಾದಂತೆ ಕಾಣುತ್ತಿದೆ” ಎಂದು ತಿಳಿಸಿದ್ದಾರೆ.

“ದೇಶದ ಕೆಲವು ರಾಜ್ಯಗಳು, ಬಹಳ ಜಾಗೃತೆಯಿಂದ ಜನರ ತಲಾದಾಯ, ಆರೋಗ್ಯ ಹಾಗೂ ಜನರಿಗೆ ಬೇಕಾದ ಉತ್ತಮ ಆರ್ಥಿಕ ವಾತಾವರಣ ಸೃಷ್ಟಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡರೂ ಕೂಡಾ ಒಟ್ಟಾರೆಯಾಗಿ ದೇಶದ ಹೆಚ್ಚಿನ ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಆಗಿಲ್ಲ. ಹೀಗಾಗಿಯೇ ಇಷ್ಟು ಹೊತ್ತಿಗೆ ಅಭಿವೃದ್ಧ ದೇಶಗಳ ಪಟ್ಟಿಯಲ್ಲಿ ಇರಬೇಕಾಗಿದ್ದ ದೇಶ, ಇನ್ನೂ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲೇ ಇದೆ” ಎಂದು ಹೇಳಿದ್ದಾರೆ.

“ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಬೇಕಾದ ಜವಾಬ್ದಾರಿಯನ್ನು ಹೊಂದಿರುವ ಕೇಂದ್ರದ ಬಿಜೆಪಿ ಸರ್ಕಾರವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿ, ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದನ್ನು ಬಿಟ್ಟು, ಕೇವಲ ಚುನಾವಣಾ ರಾಜಕೀಯದ ದೃಷ್ಟಿಯಿಂದ ತೀರಾ ಅತಾರ್ಕಿಕವಾಗಿ ಮತ ಕ್ಷೇತ್ರಗಳ ಹೆಚ್ಚಳಕ್ಕೆ ಮುಂದಾಗಿರುವುದು ಅತ್ಯಂತ ಕೆಟ್ಟ ಸಂಗತಿಯಾಗಿದೆ” ಎಂದು ತಿಳಿಸಿದ್ದಾರೆ.

“ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶದ ವಿವಿಧ ರಾಜ್ಯಗಳು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದು ಅದರಲ್ಲಿ ಯಶ ಕಂಡಿವೆ ಕೂಡಾ. ಈ ಪೈಕಿ ಕೇರಳ ಆದಿಯಾಗಿ ದಕ್ಷಿಣ ಭಾರತದ ರಾಜ್ಯಗಳೇ ಉತ್ತಮ ಸಾಧನೆಯನ್ನು ಮಾಡಿವೆ. ಹೀಗಿರುವಾಗ ಜನಸಂಖ್ಯೆ ಆಧರಿಸಿ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಚುನಾವಣಾ ಕ್ಷೇತ್ರಗಳನ್ನು ನೀಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಚುನಾವಣಾ ಕ್ಷೇತ್ರಗಳನ್ನು ನೀಡುವ ಹುನ್ನಾರವು ದಕ್ಷಿಣ ಭಾರತ ವಿರೋಧಿ ನಡೆಯಾಗಿದೆ” ಎಂದು ಆರೋಪಿಸಿದ್ದಾರೆ.

“ತೆರಿಗೆ ಪಾವತಿಯಿಂದ ಹಿಡಿದು, ದೇಶದ ಅಭಿವೃದ್ಧಿಯ ಎಲ್ಲ ಮಗ್ಗುಲುಗಳಲ್ಲೂ ಸಹ ದಕ್ಷಿಣ ಭಾರತದ ರಾಜಗಯಗಳು ತನ್ನದೇ ಆದ ಮಹತ್ವದ ಕೊಡುಗೆ ನೀಡಿವೆ. ಹೀಗಿರುವಾಗ ದಕ್ಷಿಣದ ರಾಜ್ಯಗಳ ಮೇಲೆ ಸದಾ ತಾರತಮ್ಯ ತೋರುವ ಕೇಂದ್ರದ ಬಿಜೆಪಿ ಸರ್ಕಾರ, ದಕ್ಷಿಣದ ರಾಜ್ಯಗಳ ರಾಜಕೀಯ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡುವ ದುರುದ್ದೇಶದಿಂದ ಉತ್ತರ ಭಾರತಕ್ಕೆ ಹೆಚ್ಚು ಮತ್ತು ದಕ್ಷಿಣ ಭಾರತಕ್ಕೆ ಕಡಿಮೆ ಮತ ಕ್ಷೇತ್ರಗಳನ್ನು ಹಂಚಿಕೆ ಮಾಡಲು ಹೊರಟಿದ್ದು, ಇದನ್ನು ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ದಕ್ಷಿಣದ ರಾಜ್ಯಗಳು ಖಂಡಿಸಬೇಕು” ಎಂದು ಆಗ್ರಹಿಸಿದ್ದಾರೆ.

“ದೇಶದ ಪ್ರಮುಖ ವಿಷಯವಾದ ಮತ ಕ್ಷೇತ್ರಗಳ ಹೆಚ್ಚಳ ಕಾಯ್ದೆಯನ್ನು, ಮುನ್ನಲೆಗೆ ತಾರದೇ, ಒಳಗಿಂದೊಳಗೆಯೇ ಮಾಡುವುದರ ಉದ್ದೇಶ ಏನು ಎಂದು ಗಮನಿಸಿದರೆ ಸಾಕು, ಕೇಂದ್ರ ಸರ್ಕಾರ ಮಾಡಲು ಹೊರಟಿರುವುದು ಕುತಂತ್ರ ಎಂದೇ ಅರ್ಥವಾಗುತ್ತದೆ” ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments