ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾದ ಎಜುಕೇಶನ್ ಕ್ವಾಲಿಟಿ ಫೌಂಡೇಶನ್ ಆಫ್ ಇಂಡಿಯಾ (ಇಕ್ಯೂಎಫ್ಐ) ಕಲಿಕೆ ಮತ್ತು ಬೋಧನೆಯ ಭವಿಷ್ಯ ರೂಪಿಸುವಲ್ಲಿ ಗಮನಾರ್ಹ ದಾಪುಗಾಲು ಹಾಕುತ್ತಿದೆ.
ಇಕ್ಯೂಎಫ್ಐ ಸಂಸ್ಥೆ ತನ್ನ ಬೆಂಬಲದೊಂದಿಗೆ ಐಬಿಎಂ ಕಲಿಯುವವರಲ್ಲಿ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಹಾಗೂ ನಾವೀನ್ಯತೆ ಬೆಳೆಸಲು ನವ ತಂತ್ರಜ್ಞಾನ ಮತ್ತು ಬೋಧನಾ ಸಾಧನಗಳನ್ನು ಬಳಸಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸಮ್ಮೇಳನ ಆಯೋಜಿಸಿತ್ತು.
ಈ ಸಮ್ಮೇಳನದ ಮುಖ್ಯ ಉದ್ದೇಶ ಸಾಮರ್ಥ್ಯ ಆಧಾರಿತ ಕಲಿಕೆ ಮತ್ತು ತಂತ್ರಜ್ಞಾನ-ಕೇಂದ್ರಿತ ಪಠ್ಯಕ್ರಮದಲ್ಲಿ ಶಿಕ್ಷಕರ ಕೌಶಲ್ಯಗಳನ್ನು ಹೆಚ್ಚಿಸುವುದಾಗಿತ್ತು. ಸಮ್ಮೇಳನದ ಕೇಂದ್ರ ವಿಷಯ ತಂತ್ರಜ್ಞಾನ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲಾಯಿತು.
ಶಿಕ್ಷಣದಲ್ಲಿ ನವ ತಂತ್ರಜ್ಞಾನ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಎನ್‌ಜಿಒಗಳು, ಉದ್ಯಮ ತಜ್ಞರು ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಪರಿಸರ ವ್ಯವಸ್ಥೆಯ ಪಾಲುದಾರರ ಪ್ಯಾನ್-ಇಂಡಿಯಾ ಒಕ್ಕೂಟವನ್ನು ನಿರ್ಮಿಸುವ ಗುರಿಯನ್ನು ಸಮ್ಮೇಳನದಲ್ಲಿ ಪ್ರಚುರ ಪಡಿಸಲಾಯಿತು.

ಇಕ್ಯೂಎಫ್‌ಐನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಅಂಜಲಿ ಪ್ರಕಾಶ್ ಅವರು ಮಾತನಾಡಿ, “ಬದಲಾಗುತ್ತಿರುವ ಜಗತ್ತಿನಲ್ಲಿ, ಭವಿಷ್ಯವನ್ನು ಕಲ್ಪಿಸಲು ನಾವು ಮಕ್ಕಳಿಗೆ ಕೌಶಲ್ಯಗಳನ್ನು ನೀಡಬೇಕು. ಇಕ್ಯೂಎಫ್ಐನಲ್ಲಿ, ಭವಿಷ್ಯಕ್ಕಾಗಿ ಶಿಕ್ಷಣ ತಜ್ಞರು ಮತ್ತು ಕಲಿಯುವವರನ್ನು ಸಿದ್ಧಪಡಿಸಲು ನಾವು ಹೊಸ ತಂತ್ರಜ್ಞಾನಗಳನ್ನು ಬಳಸುತ್ತೇವೆ. ಪರಿವರ್ತನಾತ್ಮಕ ಉಪಕ್ರಮಗಳಿಗೆ ಅವರನ್ನು ಸಿದ್ಧಪಡಿಸುವುದು ಮತ್ತು ಉತ್ತೇಜಿಸುವುದು ನಮ್ಮ ಆಧ್ಯತೆಯಾಗಿದೆ” ಎಂದು ಹೇಳಿದರು.
ಸಮಗ್ರ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಪ್ರಸಾದ್ ಎಸ್ ಕೆ ಬಿ ಮಾತನಾಡಿ, “ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವಲ್ಲಿ ಇಂತಹ ಸಮ್ಮೇಳನಗಳು ಸಹಕಾರಿ. ಶಿಕ್ಷಣದಲ್ಲಿ ತಂತ್ರಜ್ಞಾನದ ಹೇಗೆ ಸಂಯೋಜಿಸಬೇಕು ಎಂಬುದನ್ನು ಒತ್ತಿಹೇಳುತ್ತದೆ” ಎಂದರು.
“ಶೈಕ್ಷಣಿಕ ಉತ್ಕೃಷ್ಟತೆಯನ್ನು ಹೆಚ್ಚಿಸಲು ಮತ್ತು ರಾಜ್ಯದಾದ್ಯಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ಕಲಿಕೆಯ ವಾತಾವರಣವನ್ನು ಸೃಷ್ಟಿಸುವ ನಮ್ಮ ಬದ್ಧತೆಗೆ ಈ ಸಮ್ಮೇಳನ ಸಹಕಾರಿಯಾಗಲಿದೆ” ಎಂದರು ತಿಳಿಸಿದರು.
ಸಮ್ಮೇಳನದಲ್ಲಿ ಡಿಎಸ್‌ಇಆರ್‌ಟಿ ಹಿರಿಯ ಸಹಾಯಕ ನಿರ್ದೇಶಕರಾದ ರಾಧಾ ಪಿ, ಪ್ರೊ. ಚಂದ್ರಶೇಖರ್, ಪ್ರೊ. ರಿಷಿಕೇಶ್ ಬಿ ಎಸ್, ವಿಶ್ವನಾಥ್, ಉಪನ್ಯಾಸಕಿ ಭಾಗ್ಯಲಕ್ಷ್ಮಿ ಸೇರಿದಂತೆ ಇತತರು ಇದ್ದರು.
ಇಕ್ಯೂಎಫ್ಐ ಕುರಿತು
2007ರಲ್ಲಿ ಸ್ಥಾಪನೆಯಾದ ಇಕ್ಯೂಎಫ್ಐ ಪ್ರತಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆಯು ಭಾರತದ 19 ರಾಜ್ಯಗಳಾದ್ಯಂತ ವ್ಯಾಪಿಸಿದೆ. 3,00,000 ವಿದ್ಯಾರ್ಥಿಗಳು, 15,000 ಶಿಕ್ಷಕರು ಮತ್ತು 5,000 ಶಾಲೆಗಳನ್ನು ತಲುಪುವ ಗುರಿಯನ್ನು ಇದು ಹೊಂದಿದೆ.
