Homeಕರ್ನಾಟಕಹಾವೇರಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆ: ಆರೋಪಿ ನಾಶಿಪುಡಿಗೂ ಇದಕ್ಕೂ ಸಂಬಂಧವಿಲ್ಲ: ಸಚಿವ ಪರಮೇಶ್ವರ್

ಹಾವೇರಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆ: ಆರೋಪಿ ನಾಶಿಪುಡಿಗೂ ಇದಕ್ಕೂ ಸಂಬಂಧವಿಲ್ಲ: ಸಚಿವ ಪರಮೇಶ್ವರ್

ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗಲಾಟೆ ಯಾರು ಮಾಡಿದರು ಅಂತ ವಿಚಾರಣೆ ನಡೆಯುತ್ತಿದೆ. ಆಂಧ್ರ ಪ್ರದೇಶದಿಂದಲೂ ಬ್ಯಾಡಗಿ ಮಾರುಕಟ್ಟೆಗೆ ರೈತರು ಬರುತ್ತಾರೆ. ಸೋಮವಾರ (ಮಾ.11) ರಂದು ಘಟನೆಯಲ್ಲಿ 6-7 ಗಾಡಿಗಳನ್ನು ಸುಟ್ಟು ಹಾಕಿದ್ದಾರೆ. ಏಕಾಏಕಿ ದರ ಅಷ್ಟು ಯಾಕೆ ಕುಸಿದಿದೆ ಅಂತ ಗೊತ್ತಿಲ್ಲ. ಇದನ್ನ ತನಿಖೆ ಮಾಡಿ ತಿಳಿಸಿ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, “ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಡಿ ಬಂಧಿತವಾಗಿರುವ ನಾಶಿಪುಡಿಗೂ ಮತ್ತು ಈ ಘಟನೆಗೂ ಸಂಬಂಧವಿಲ್ಲ. ಯಾರು ಕಾರಣ ಅಂತ ಕಂಡುಹಿಡಿಯಬೇಕಿದೆ. ಇವತ್ತಿನಿಂದ ಎಲ್ಲ ಪ್ರಕ್ರಿಯೆ ಮತ್ತೆ ಆರಂಭವಾಗುತ್ತದೆ” ಎಂದರು.

ಬಾಂಬ್ ಸ್ಫೋಟದ ಆರೋಪಿ ಮಲೆನಾಡಿನ ವ್ಯಕ್ತಿ ಎಂಬ ಶಂಕೆ ವ್ಯಕ್ತವಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, “ನಾನು ಮಾಧ್ಯಮಗಳಲ್ಲಿ ನೋಡಿದೆ. ಕರ್ನಾಟಕದವನು ಎಂಬುವುದು ಊಹಾಪೋಹ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದಾಗ ಸತ್ಯ ಗೊತ್ತಾಗುತ್ತದೆ” ಎಂದು ಹೇಳಿದರು.

ಸಿಎಎ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, “ರಾಜಕೀಯ ಕಾರಣಕ್ಕೆ ಮಾಡಿದ್ದಾರೆ ಎಂದು ಒಂದು ವಾದವಿದೆ. ಮಾಹಿತಿ ಸಿಕ್ಕಿದಾಗ ಮಾತಾಡಬಹುದು. ನಿಯಮಗಳ ಮೇಲೆ ಪ್ರತಿಕ್ರಿಯಿಸಬಹುದು” ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮಾತನಾಡಿ, “21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಭೆ ಮಾಡಿದರು. ಆದರೆ ಎಷ್ಟು ಕ್ಷೇತ್ರಗಳಿಗೆ ಕ್ಲಿಯರ್ ಆಗಿದೆ ಗೊತ್ತಿಲ್ಲ. ಬುಧವಾರ ಸಭೆ ಇದೆ. ಇಂದು ಕ್ಲಿಯರ್ ಆದರೆ ದೆಹಲಿಗೆ ಪಟ್ಟಿ ತೆಗೆದುಕೊಂಡು ಹೋಗುತ್ತಾರೆ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments