Homeಕರ್ನಾಟಕ4 ಲಕ್ಷ ಕೋಟಿ ಸಾಲ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ:ಬಸವರಾಜ ಬೊಮ್ಮಾಯಿ

4 ಲಕ್ಷ ಕೋಟಿ ಸಾಲ ಮಾಡಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ:ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ವಸ್ತುಗಳ ಬೆಲೆ ಏರಿಕೆಯಾಗಿಲ್ಲ ಎಂದು ಸಾಬೀತುಪಡಿಸಿದರೆ ಅಂಥವರಿಗೆ 1 ಲಕ್ಷ ರೂಪಾಯಿಗಳ ಬಹುಮಾನ ನೀಡುವುದಾಗುವುದು, ಈ ಸರ್ಕಾರ ಬಂದ ಮೇಲೆ 4 ಲಕ್ಷ ಕೋಟಿ ಸಾಲ ಮಾಡಿರುವುದೇ ದಾಖಲೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ದ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರು, ಅಡುಗೆ ಎಣ್ಣೆ, ಕುಡಿಯುವ ಎಣ್ಣೆ, ಕಸದಿಂದ ಹಿಡಿದು ಹಾಲು, ಅಲ್ಕೋಹಾಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಮತ್ತು ಸೇವೆಗಳ ಬೆಲೆಗಳು ಎರಡರಿಂದ ಮೂರು ಪಟ್ಟು ಹೆಚ್ಚಾಗಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಕ್ರಮಗಳು ಹೆಚ್ಚಾಗಿವೆ ಎಂದು ಟೀಕಿಸಿದ ಅವರು, ಅಧಿಕಾರದಲ್ಲಿರುವವರೇ ಎಲ್ಲವನ್ನೂ ಮಾಡಿಕೊಂಡು ಬಹಳ ದೊಡ್ಡ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

​ಯಡಿಯೂರಪ್ಪ ಅವರ ಕಾಲದ ಆಡಳಿತ ಸ್ಮರಣೆ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯನ್ನು ಸ್ಮರಿಸಿದ ಅವರು, ಆ ಕಾಲದಲ್ಲಿ ರಾಜ್ಯದಲ್ಲಿ ಪ್ರವಾಹ ಬಂದಾಗ ಕೇಂದ್ರ ಸರ್ಕಾರದ ಸಹಾಯಕ್ಕಾಗಿ ಕಾಯದೆ, ಯಡಿಯೂರಪ್ಪ ಅವರು ತಮ್ಮ ಸ್ವಂತ ಪರಿಹಾರವನ್ನು ಘೋಷಿಸಿ ಇಡೀ ರಾಜ್ಯವನ್ನು ಸುತ್ತಿ ಎಲ್ಲರಿಗೂ ಪರಿಹಾರ ತಲುಪಿಸುವ ಕೆಲಸ ಮಾಡಿದ್ದರು. ಇಡೀ ಭಾರತ ದೇಶದಲ್ಲೇ ಪ್ರವಾಹ ಬಂದ ಸಂದರ್ಭದಲ್ಲಿ 5 ಲಕ್ಷ ರೂ. ಮನೆ ಪರಿಹಾರವನ್ನು ಘೋಷಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ರೈತರಿಗೆ ಪರಿಹಾರ ನೀಡಿದ ನೈತಿಕ ಹಕ್ಕು ಬಿಜೆಪಿಗಿದೆ

ತಮ್ಮ ಅಧಿಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ನೆರವಿನ ಜೊತೆಗೆ ಹೆಚ್ಚಿನ ಅನುದಾನ ಸೇರಿಸಿ ನೀರಾವರಿ ಹಾಗೂ ರೈತರಿಗೆ 25,000 ರೂಪಾಯಿಗಳ ವರೆಗೆ ಪರಿಹಾರ ನೀಡಲಾಗಿದ್ದು, ಪ್ರತಿಪಕ್ಷದ ನಾಯಕ ಆರ್‌ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರಿಗೆ ಅದೇ ಪರಿಹಾರವನ್ನು ಈಗ ಕೇಳುವ ಸಂಪೂರ್ಣ ನೈತಿಕ ಹಕ್ಕಿದೆ ಎಂದು ಹೇಳಿದರು.
​

ಪೆಟ್ರೋಲ್ ಬೆಲೆ ಇಳಿಕೆ ದಾಖಲೆ

ಹಿಂದೆ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಇಳಿಕೆ ಮಾಡಿದಾಗ ರಾಜ್ಯ ಸರ್ಕಾರವೂ ಸುಮಾರು ಏಳು ರೂಪಾಯಿಗಳಷ್ಟು ತೆರಿಗೆಯನ್ನು ಕಡಿತಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿದ ದಾಖಲೆ ಇದೆ ಎಂದು ಹೇಳಿದರು.

​4 ಲಕ್ಷ ಕೋಟಿ ಸಾಲ

ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ದಾಖಲೆ ಮಾಡದಿದ್ದರೂ, ಪ್ರತಿವರ್ಷ ಲಕ್ಷಾಂತರ ಕೋಟಿಗಳಂತೆ ಒಟ್ಟು 4 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಸಾಲ ಮಾಡಿರುವುದು ಮಾತ್ರ ದೊಡ್ಡ ದಾಖಲೆಯಾಗಿದೆ ಎಂದು ಟೀಕಿಸಿದರು.
​
ಎಡವಟ್ಟು ಹಾಗೂ ಅಡಮುಟ್ಟು ಸರ್ಕಾರ

ಇದು ಸಂಪೂರ್ಣವಾಗಿ ‘ಎಡವಟ್ಟು ಮತ್ತು ಅಡಮುಟ್ಟು ಸರ್ಕಾರ. ಸರ್ಕಾರದಲ್ಲಿ ಯಾವುದೇ ಸುಧಾರಣೆ ಮಾಡಿಕೊಳ್ಳುವ ಸ್ವಭಾವವಿಲ್ಲ ​ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಜನರಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯವಿಲ್ಲದಂತಾಗಿದೆ ಎಂದರು.

​​ರಾಜ್ಯದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ

ಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಹಾಗೂ ಮುನ್ಸಿಪಾಲಿಟಿಯ 4ನೇ ದರ್ಜೆ ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ. ​ಈಗಾಗಲೇ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಮೂರರಿಂದ ನಾಲ್ಕು ತಿಂಗಳಿಂದ ಗೌರವಧನ ಬಂದಿಲ್ಲ. 108 ತುರ್ತು ವಾಹನ ಸೇವೆ ಸಂಪೂರ್ಣವಾಗಿ ನಿಂತುಹೋಗಿದ್ದು, ಅಲ್ಲಿಯ ಡ್ರೈವರ್‌ಗಳಿಗೂ ವೇತನ ನೀಡಿಲ್ಲ ಎಂದು ಆರೋಪಿಸಿದರು.
​

2028ರಲ್ಲಿ ಜನರಿಂದ ತಕ್ಕ ಪಾಠ

ಇದು ಕೆಟ್ಟು ಹೋದ ಬಸ್ಸಿನಂತೆ ಸಾಗುತ್ತಿದೆ. ಈ ಸರ್ಕಾರದಲ್ಲಿ ಯಾವುದೇ ಸುಧಾರಣೆ ಮಾಡಲು ಸಾಧ್ಯವಿಲ್ಲ. ಸಂಪೂರ್ಣವಾಗಿ ಕೆಟ್ಟು ಹೋದ ಬಸ್ಸನ್ನು ಗುಜರಿಗೆ ಹಾಕುವಂತೆ, 2028ರಲ್ಲಿ ಜನರೇ ಈ ಸರ್ಕಾರವನ್ನು ಗುಜರಿಗೆ ಹಾಕುವುದು ಗ್ಯಾರೆಂಟಿ ಎಂದು ವಾಗ್ದಾಳಿ ನಡೆಸಿದರು.ಐದು ಗ್ಯಾರೆಂಟಿ ಎನ್ನುವ ಸರ್ಕಾರದಲ್ಲಿ, ಕೇವಲ ನರೇಂದ್ರ ಮೋದಿಯವರ 5 ಕೆ.ಜಿ ಅಕ್ಕಿ ಮಾತ್ರ ಬಡವರಿಗೆ ತಲುಪುತ್ತಿದ್ದು, ಮನೆ ನಿರ್ಮಾಣ, ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿಯಂತಹ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರದಿಂದ ಕೆಳಗಿಳಿಸಲು ಕರೆ

ರಾಜ್ಯದಲ್ಲಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಭಾರವಾಗಿದೆ. ಒಂದು ವೇಳೆ ಬೆಲೆ ಕಮ್ಮಿಯಾಗಿದ್ದರೆ ಅದು ಮನುಷ್ಯನ ಬೆಲೆ ಮತ್ತು ಮನುಷ್ಯರ ಬದುಕಿನ ಬೆಲೆ ಮಾತ್ರ ಕಮ್ಮಿಯಾಗಿದೆ. ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಕರ್ನಾಟಕದ ಆರ್ಥಿಕತೆಯನ್ನು ಈ ಸರ್ಕಾರವು ಸಂಪೂರ್ಣವಾಗಿ ಪಾತಾಳಕ್ಕೆ ತೆಗೆದುಕೊಂಡು ಹೋಗಿದೆ ಎಂದು ಆರೋಪಿಸಿದರು.
​

ಒಗ್ಗಟ್ಟಿನ ಕರೆ

ಈಗ ನಾವು ಇಟ್ಟ ಹೆಜ್ಜೆ ಹಿಂದಿಡದೆ. ಈ ಹೋರಾಟದ ಹೆಜ್ಜೆಯನ್ನು ಜನಮತವಾಗುವವರೆಗೂ ವಿಶ್ರಮಿಸದೆ ಕೆಲಸ ಮಾಡಬೇಕು. ಈ ದುಷ್ಟ, ಭ್ರಷ್ಟ ಸರ್ಕಾರವನ್ನು ಹಿಂದಕ್ಕೆ ತಳ್ಳಿ, ಮತ್ತೊಮ್ಮೆ ಜನಪರವಾದ ಸರ್ಕಾರವನ್ನು ತರಲು ಎಲ್ಲರೂ ಒಗ್ಗಟ್ಟಾಗಿ ಸಂಕಲ್ಪ ಮಾಡಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments